ಸಲಿಂಗ ದಂಪತಿಗಳ ವಿವಾಹ ಲೈಸನ್ಸ್ ನಿರಾಕರಣೆ: ನ್ಯಾಯಾಧೀಶರ ಅಮಾನತು
ಮೌಂಟ್ಗೊಮರಿ, ಅಕ್ಟೋಬರ್ 2: ಸಲಿಂಗ ದಂಪತಿಗಳ ವಿವಾಹ ಲೈಸನ್ಸ್ ನೀಡದಂತೆ ಇತರ ಜಡ್ಜ್ಗಳ ಮೇಲೆ ಒತ್ತಡಹಾಕಿದ ಮುಖ್ಯನ್ಯಾಯಾಧೀಶರನ್ನು ಅಮಾನತಿನಲ್ಲಿರಿಸಲಾಗಿದೆ. ಅಮೆರಿಕದ ಅಲಬಾಮದ ಮುಖ್ಯನ್ಯಾಯಾಧೀಶ ರೋಯ್ ಮೂರ್ ವಿರುದ್ಧ ಸಲಿಂಗ ದಂಪತಿಗಳಿಗೆ ಲೈಸನ್ಸ್ ನೀಡದಂತೆ ಒತ್ತಡ ಹಾಕಿದ್ದಾರೆಂದು ಆರೋಪಿಸಿ ಅಮಾನತು ಶಿಕ್ಷೆ ನೀಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಮೂರ್ರು ನಿವೃತ್ತಿಯಾಗಲು ಇನ್ನೂ ಮೂರು ವರ್ಷ ಇದ್ದು ನೈತಿಕತೆಯನ್ನು ಉಲ್ಲಂಘಿಸಿದ್ದಾರೆ ಎಂದು ಅವರನ್ನು ಅಮಾನತಿನಲ್ಲಿರಿಸಿದ್ದಕ್ಕೆ ಕಾರಣ ತಿಳಿಸಲಾಗಿದೆ. ಸಲಿಂಗಕಾಮಿಗಳು ಮತ್ತು ಭಿನ್ನಲಿಂಗೀಯರ ಕುತಂತ್ರದಿಂದಾಗಿ ತನ್ನ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಜಡ್ಜ್ ರಾಯ್ ಮೂರ್ ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ತಿಳಿಸಿದೆ.
Next Story