ಪ್ಲೇಬಾಯ್ಗೆ ಲಗ್ಗೆ ಇಟ್ಟ ಹಿಜಾಬ್ ಧರಿಸಿದ ಮಹಿಳೆ
ನೂರ್ ತಗೌರಿ ಎಂಬ ಪತ್ರಕರ್ತೆ, ಹಿಜಾಬ್ ಧರಿಸಿ ಪೋಸ್ ನೀಡಿರುವ ಚಿತ್ರ ಪ್ಲೇಬಾಯ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಈ ಬಗ್ಗೆ ಓದುಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ಲೇಬಾಯ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಮುಸ್ಲಿಂ ಮಹಿಳೆ ಇತಿಹಾಸ ಸೃಷ್ಟಿಸಿದ್ದಾರೆ.
ನಿಯತಕಾಲಿಕದ "ಧರ್ಮಭ್ರಷ್ಟ ಸಂಚಿಕೆ"ಯಲ್ಲಿ ಧರ್ಮದ ನಿಯಮಾವಳಿಗಳನ್ನು ಮುರಿಯಲು ಹೆದರದ ಎಂಟು ಮಂದಿ ಪುರುಷರು ಹಾಗೂ ಒಬ್ಬ ಮಹಿಳೆಯನ್ನು ಚಿತ್ರಿಸಲಾಗಿದೆ. ಗಾಯಕಿ ಸ್ಕೈ ಫೆರಿಯಾ ಹಾಗೂ ನಟಿ ಸ್ಟೋಯಾ ಅವರ ಬಗ್ಗೆಯೂ ಲೇಖನ ಪ್ರಕಟವಾಗಿದೆ.
ಈ ಪತ್ರಿಕೆಯಲ್ಲಿ ತಗೌರಿ ಹಿಜಾಬ್, ಚರ್ಮದ ಜಾಕೆಟ್, ಟಿ-ಷರ್ಟ್, ಜೀನ್ಸ್ ಧರಿಸಿದ್ದು, ಇವರನ್ನು ಪ್ಲೇಬಾಯ್, ಗಾಂಭೀರ್ಯವೇ ಮೂರ್ತಿವೆತ್ತ ದಿಟ್ಟ ಮಹಿಳೆ ಎಂದು ಬಣ್ಣಿಸಿದೆ.
ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಇವರ ದಿಟ್ಟತನವನ್ನು ಸ್ವಾಗತಿಸಿ, ಬೆಂಬಲಿಸಿದ್ದರೆ, ಇತರ ಹಲವರು ಪಶ್ಚಿಮ ವರ್ಜೀನಿಯಾ ಮೂಲದ ಈಕೆಯನ್ನು ಕಟುವಾಗಿ ಟೀಕಿಸಿದ್ದಾರೆ.
Next Story