10 ಟ್ರಂಪ್ಗಳು ಬಂದರೂ ಪರಮಾಣು ಒಪ್ಪಂದದ ಲಾಭಗಳನ್ನು ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ: ಇರಾನ್ ಅಧ್ಯಕ್ಷ
ಟೆಹರಾನ್,ಅ.7: ವಿಶ್ವದ ಪರಮಾಣು ಸಮರ್ಥ ರಾಷ್ಟ್ರಗಳೊಂದಿಗೆ 2015ರಲ್ಲಿ ಮಾಡಿ ಕೊಂಡಿದ್ದ ಪರಮಾಣು ಒಪ್ಪಂದವನ್ನು ಸಮರ್ಥಿಸಿಕೊಂಡಿರುವ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರು, 10 ಡೊನಾಲ್ಡ್ ಟ್ರಂಪ್ಗಳು ಬಂದರೂ ಒಪ್ಪಂದದ ಲಾಭಗಳನ್ನು ತಮ್ಮ ರಾಷ್ಟ್ರಕ್ಕೆ ಮರಳಿ ಒಯ್ಯಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ. ಅಧ್ಯಕ್ಷ ಟ್ರಂಪ್ ಅವರು ಒಪ್ಪಂದವನ್ನು ರದ್ದುಗೊಳಿಸುವ ತನ್ನ ಪ್ರಸ್ತಾವನೆಯಿಂದ ಹಿಂದೆ ಸರಿಯುತ್ತಿರುವಂತೆ ಮತ್ತು ಅದರ ಬದಲು ಇರಾನ್ ವಿರುದ್ಧ ಇತರ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿ ರುವಂತೆ ಕಂಡು ಬರುತ್ತಿರುವ ಈ ಸಂದರ್ಭದಲ್ಲಿ ರೂಹಾನಿಯವರ ಟೀಕೆಗಳು ಹೊರಬಿದ್ದಿವೆ.
ಟೆಹರಾನ್ ವಿವಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ರೂಹಾನಿ ಅವರು, ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲದ ಲಾಭಗಳನ್ನು ನಾವು ಸಾಧಿಸಿದ್ದೇವೆ. ಅವುಗಳನ್ನು ಹಿಂದೆಗೆದುಕೊಳ್ಳಲು ಟ್ರಂಪ್ ಆಗಲೀ ಇತರ 10 ಟ್ರಂಪಗಳಾಗಲೀ....ಯಾರಿಗೂ ಸಾಧ್ಯ್ಯವಿಲ್ಲ ಎಂದರು.
ಒಪ್ಪಂದದ ಅಂಗವಾಗಿ ಇರಾನ್ ತನ್ನ ವಿವಾದಿತ ಪರಮಾಣು ಕಾರ್ಯಕ್ರಮದ ಮೇಲಿನ ನಿರ್ಬಂಧಗಳನ್ನು ಒಪ್ಪಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಇತರ ಲಾಭಗಳ ಜೊತೆಗೆ ತನ್ನ ತೈಲ ರಫ್ತುಗಳ ಮೇಲಿನ ನಿರ್ಬಂಧಗಳು ರದ್ದುಗೊಂಡಿದ್ದರ ಲಾಭವನ್ನು ಇರಾನ್ ಪಡೆದುಕೊಂಡಿದೆ.
ಇರಾನಿನ ರೆವೆಲ್ಯೂಷನರಿ ಗಾರ್ಡ್ ಮತ್ತು ಇರಾನ್ ಬೆಂಬಲಿತ ಶಿಟ್ಟೆ ಉಗ್ರರ ಗುಂಪು ಹಿಜ್ಬುಲ್ಲಾದ ವಿರುದ್ಧ ಟ್ರಂಪ್ ನೂನ ಕ್ರಮಗಳನು ತೆಗೆದುಕೊಳ್ಳುವ ನಿರೀಕ್ಷೆಯಿದೆ.