ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ: 20 ಶಾಸಕರು ಗೈರು
ಬೆಂಗಳೂರು, ಜು.9: ರಾಜ್ಯದ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಹರಸಾಹಸ ಪಡುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಇದೀಗ ಆರಂಭಗೊಂಡಿದೆ. ಆದರೆ ಸುಮಾರು 20 ಕಾಂಗ್ರೆಸ್ ಶಾಸಕರು ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಕಾಂಗ್ರೆಸ್ ಶಾಸಕರ ಸಂಖ್ಯೆ ಒಟ್ಟು ಸಂಖ್ಯೆ 79 ಇದೆ. ಆದರೆ ಈ ಪೈಕಿ ಸಚಿವ ಎಂಟಿಬಿ ನಾಗರಾಜ್, ರಾಮಲಿಂಗಾರೆಡ್ಡಿ, ಮುನಿರತ್ನ, ಡಾ.ಸುಧಾಕರ್, ಸಂಗಮೇಶ್, ಅಂಜಲಿ ನಿಂಬಾಳ್ಕರ್, ಆನೆಕಲ್ ಶಿವಣ್ಣ ಹಾಗೂ ರೋಷನ್ ಬೇಗ್ ಸಹಿತ ಒಟ್ಟು 20 ಶಾಸಕರು ಗೈರು ಹಾಜರಾಗಿದ್ದಾರೆ.
Next Story