ಜ.18ರಂದು ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಚುನಾವಣೆ
ಬೆಂಗಳೂರು, ಜ.2: ಎರಡು ಬಾರಿ ಮುಂದೂಡಲಾಗಿದ್ದ ಬಿಬಿಎಂಪಿ 12 ಸ್ಥಾಯಿ ಸಮಿತಿಗಳ ಚುನಾವಣೆ ಜ.18ರಂದು 11:30ಕ್ಕೆ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ್, ಜ.18ರಂದು 11:30ಕ್ಕೆ ಕೆಂಪೇಗೌಡ ಪೌರ ಸಭಾಂಗಣದಲ್ಲಿ 12 ಸ್ಥಾಯಿ ಸಮಿತಿಗಳ ಚುನಾವಣೆ ನಡೆಯಲಿದೆ. ಡಿ.31ರಂದು 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಿಗದಿ ಪಡಿಸಲಾಗಿದ್ದರೂ ಅಂದು ಕಾಂಗ್ರೆಸ್, ಜೆಡಿಎಸ್, ಪಕ್ಷಗಳ ಸದಸ್ಯರು ಸ್ಧಾಯಿ ಸಮಿತಿ ಚುನಾವಣೆಗೆ ನಾಮಪತ್ರಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಿರಲಿಲ್ಲ.
ಪಾಲಿಕೆಯ 12 ಸ್ಥಾಯಿ ಚುನಾವಣೆಗೆ ಸದಸ್ಯರ ಕೋರಂ ಕೊರತೆ ಇದ್ದುದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಎರಡು ಬಾರಿ ಮುಂದೂಡಲಾಗಿದ್ದ 12 ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಜ. 18 ರಂದು ನಡೆಸಲಾಗುವುದು ಎಂದು ತಿಳಿಸಿದರು.
Next Story