ಬರ್ತ್ ಡೇ ಪಾರ್ಟಿ ವೇಳೆ ಲಘು ಸ್ಫೋಟ: ಶಾಸಕ ಎನ್.ಎ ಹಾರೀಸ್ ಗೆ ಗಾಯ
ಬೆಂಗಳೂರು, ಜ.22: ಬರ್ತ್ ಡೇ ಪಾರ್ಟಿ ವೇಳೆ ಲಘು ಸ್ಫೋಟವಾಗಿ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ ಹಾರೀಸ್ ಗೆ ಗಾಯಗಳಾದ ಘಟನೆ ಹೊನ್ನಿಪೇಟೆಯ ಬಜಾರ್ ಸ್ಟ್ರೀಟ್ ನಲ್ಲಿ ಇಂದು ರಾತ್ರಿ ನಡೆದಿದೆ.
ನಗರದಲ್ಲಿ ನಡೆದ ಬರ್ತ್ ಡೇ ಪಾರ್ಟಿ ಒಂದರಲ್ಲಿ ಶಾಸಕ ಹಾರೀಸ್ ಪಾಲ್ಗೊಂಡಿದ್ದು, ಕಾರ್ಯಕ್ರಮ ನಡೆಯುತ್ತಿರುವ ವೇಳೆ ಮೇಲಿಂದ ಬಂದ ನಿಗೂಢ ವಸ್ತುವೊಂದು ಸ್ಫೋಟಗೊಂಡಿದೆ ಎನ್ನಲಾಗಿದೆ. ಪರಿಣಾಮ ಶಾಸಕ ಹಾರೀಸ್ ಅವರ ಕಾಲಿಗೆ ಹಾಗೂ ಇತರೆ ನಾಲ್ಕೈದು ಮಂದಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಗೊಂಡ ವಸ್ತು ಯಾವುದು ಎಂಬುವುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.
ಸ್ಥಳಕ್ಕೆ ಅಶೋಕನಗರ ಪೊಲೀಸರು ಹಾಗು ವಿವೇಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಶಾಸಕ ಹಾರೀಸ್ ದಾಖಲಾಗಿರುವ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು, ಬೆಂಬಲಿಗರು ಆಗಮಿಸುತ್ತಿದ್ದು, ಪೊಲೀಸರು ಪರಸ್ಥಿತಿ ನಿಯಂತ್ರಿಸುತ್ತಿದ್ದಾರೆ.
Next Story