ವಿಧಾನಸೌಧಕ್ಕೆ ಮಧ್ಯಾಹ್ನ 3:30ರ ನಂತರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ
ಬೆಂಗಳೂರು, ಜೂ. 24: ಕೊರೋನ ಸೋಂಕಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡ(ಎಂ.ಎಸ್.ಬಿಲ್ಡಿಂಗ್) ಕಟ್ಟಡಗಳಿಗೆ ಮಧ್ಯಾಹ್ನ 3:30ರ ನಂತರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸಚಿವರು/ಅಧಿಕಾರಿಗಳನ್ನು ಭೇಟಿ ಮಾಡಲು ಬರುವ ಸಾರ್ವಜನಿಕರು ಮಧ್ಯಾಹ್ನ 3:30ರ ನಂತರ ವಿಧಾನಸೌಧ/ ವಿಕಾಸಸೌಧ ಪ್ರವೇಶಿಸಬೇಕು. ಅದಕ್ಕೂ ಮೊದಲು ಯಾವುದೇ ಕಾರಣಕ್ಕೂ ಮೇಲ್ಕಂಡ ಕಟ್ಟಡಗಳಿಗೆ ಒಳಗೆ ಪ್ರವೇಶ ಇರುವುದಿಲ್ಲ. ಸಾರ್ವಜನಿಕರು ಹಾಗೂ ಸರಕಾರಿ ನೌಕರರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ವಹಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Next Story