ದ್ವಿತೀಯ ಪಿಯು ಪರೀಕ್ಷೆ: ಫಾಲ್ಕನ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ
ಬೆಂಗಳೂರು, ಜು.15: ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಶಾಹೀನ್ಸ್ ಫಾಲ್ಕನ್ ಪಿಯು ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ.
ಕಾಲೇಜಿನ ವಿದ್ಯಾರ್ಥಿನಿಯರಾದ ಅಫೀಫಾ ಫಾತಿಮಾ ಹಾಗೂ ಶಾಹಿನಾ ಫರ್ಹೀನ್ ತಲಾ 577(96.16 ಶೇ.) ಅಂಕ ಹಾಗೂ ಸನಾ ಮಲಿಕ್ 574(95.66 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಫೀಫಾ ಗಣಿತ, ಜೀವಶಾಸ್ತ್ರ ವಿಷಯಗಳಲ್ಲಿ 100 ಶೇ. ಅಂಕಗಳನ್ನು ಗಳಿಸಿದ್ದಾರೆ.
25ಕ್ಕಿಂತ ಅಧಿಕ ವಿದ್ಯಾರ್ಥಿಗಳು ಪ್ರಮುಖ ಮೂರು ವಿಷಯಗಳಲ್ಲಿ ತಲಾ 95 ಶೇ. ಅಂಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಅವಿರತ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಅತ್ಯುತ್ತಮ ಫಲಿತಾಂಶ ಗಳಿಸಲು ಕಾರಣಕರ್ತರಾದ ಪ್ರತಿಯೋರ್ವ ವಿದ್ಯಾರ್ಥಿ, ಅವರ ಪೋಷಕರಿಗೆ ಫಾಲ್ಕನ್ ಸಂಸ್ಥೆಯ ಎಂ.ಡಿ. ಅಬ್ದುಲ್ ಸುಭಾನ್ ಅಭಿನಂದನೆ ಸಲ್ಲಿಸಿದ್ದಾರೆ.
Next Story