ಜೂಜಾಟ ಕ್ಲಬ್ಗಳ ಮೇಲೆ ಸಿಸಿಬಿ ದಾಳಿ: 60 ಮಂದಿಯ ಬಂಧನ
ಬೆಂಗಳೂರು, ಸೆ.1: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು, 60 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇಲ್ಲಿನ ಸಂಪಿಗೆಹಳ್ಳಿ ಹಾಗೂ ಇಂದಿರಾನಗರದಲ್ಲಿರುವ ಮೂರು ಕ್ಲಬ್ಗಳ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಕ್ಲಬ್ವೊಂದರ ಮಾಲಕ ಯುವರಾಜ್ ಎಂಬುವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.
Next Story