ಎಫ್ಐಆರ್ ದಾಖಲಿಸಲು ಲಂಚಕ್ಕೆ ಬೇಡಿಕೆ ಆರೋಪ: ಮಹಿಳಾ ಪಿಎಸ್ಸೈ, ಹೆಡ್ ಕಾನ್ಸ್ಟೇಬಲ್ ಎಸಿಬಿ ಬಲೆಗೆ
ಬೆಂಗಳೂರು, ಜ.12: ಪ್ರಕರಣವೊಂದರ ಸಂಬಂಧ ಎಫ್ಐಆರ್ ದಾಖಲು ಮಾಡಲು 1 ಲಕ್ಷ ರೂ. ನೀಡುವಂತೆ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಮಹಿಳಾ ಪಿಎಸ್ಸೈ, ಹೆಡ್ ಕಾನ್ಸ್ಟೇಬಲ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪ್ರಕರಣವೊಂದರಲ್ಲಿ ಎಫ್ಐಆರ್ ದಾಖಲಿಸಲು ದೂರುದಾರರಿಂದ 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು, ಎಸಿಬಿ ಕಾರ್ಯಾಚರಣೆ ವೇಳೆ ಠಾಣೆಯಲ್ಲಿದ್ದ ಮತ್ತೊಬ್ಬ ಕಾನ್ಸ್ಟೇಬಲ್ ಓಡಿಹೋಗಲು ಯತ್ನಿಸಿ ಜಾರಿ ಬಿದ್ದಿದ್ದು, ಅವರ ಕಾಲಿನ ಮೂಳೆ ಮುರಿದಿದೆ ಎನ್ನಲಾಗಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
Next Story