ಬಿಬಿಎಂಪಿ ಬಜೆಟ್ಗೆ 665 ಕೋಟಿ ರೂ. ಹೆಚ್ಚುವರಿ ಸೇರ್ಪಡೆ
ಬೆಂಗಳೂರು, ಜೂ.16: ಬಿಬಿಎಂಪಿಯ 2021-22ನೇ ಸಾಲಿನ ವಾರ್ಷಿಕ ಬಜೆಟ್ಗೆ 665 ಕೋಟಿ ರೂ. ಹೆಚ್ಚುವರಿ ಸೇರ್ಪಡೆ ಮಾಡುವ ಮೂಲಕ ಬಜೆಟ್ ಗಾತ್ರವನ್ನು 9,951.8 ರೂ.ಗೆ ಹೆಚ್ಚಿಸಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ.
ಬಿಬಿಎಂಪಿಯು 2021-22ನೇ ಸಾಲಿಗೆ 9,286.80 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿ ಅಂಗೀಕರಿಸಿತ್ತು. ಇದೀಗ ನಗರಾಭಿವೃದ್ಧಿ ಇಲಾಖೆಯು ಈ ಮೊತ್ತವನ್ನು ಪರಿಷ್ಕರಿಸಿ ಒಟ್ಟು 9,951.8 ಕೋಟಿ ಗಾತ್ರದ ಬಜೆಟ್ಗೆ ಅನುಮೋದನೆ ನೀಡಿದ್ದು, ಹೆಚ್ಚುವರಿ 665 ಕೋಟಿ ರೂ. ಹೆಚ್ಚುವರಿ ಸೇರ್ಪಡೆ ಆಗಿದೆ.
Next Story