ಬೆಂಗಳೂರು: ರೌಡಿಗಳ ನಿವಾಸದ ಮೇಲೆ ಮತ್ತೆ ದಾಳಿ
ಬೆಂಗಳೂರು, ಜು. 25: ಗಂಭೀರ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಲ್ಲಿನ ಆಗ್ನೇಯ ವಿಭಾಗದ ಪೊಲೀಸರು, ರೌಡಿಗಳ ಮನೆಗಳ ಮೇಲೆ ದಾಳಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ರವಿವಾರ ದಾಳಿ ನಡೆಸಿದ ವೇಳೆ ಬೇಗೂರು ಠಾಣೆ ಪೊಲೀಸರು 5 ಮಂದಿ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ರೌಡಿ ಬಬ್ಲಿ ಕೊಲೆಯ ನಂತರ ಆಗ್ನೇಯ ವಿಭಾಗದ ಪೊಲೀಸರು ರೌಡಿಗಳ ವಿರುದ್ಧ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈಗಾಗಲೇ ಆಡುಗೋಡಿ ಠಾಣೆಯ ಪೊಲೀಸರು 20 ಮಂದಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಐದು ಮಂದಿ ರೌಡಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story