ಮಾದಕ ವಸ್ತು ಮಾರಾಟ ಆರೋಪ: ವಿದೇಶಿ ಪ್ರಜೆ ಸೆರೆ
ಬೆಂಗಳೂರು, ಡಿ.4: ಮಾದಕ ವಸ್ತು ಮಾರಾಟ ಆರೋಪ ಪ್ರಕರಣ ಸಂಬಂಧ ವಿದೇಶಿ ಪ್ರಜೆಯೋರ್ವನನ್ನು ಇಲ್ಲಿನ ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ, ಲಕ್ಷಾಂತರ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.
ಪಶ್ಚಿಮ ಆಫ್ರಿಕಾ ದೇಶದ ಐವರಿಯನ್ ದೇಶದ ಆಂಟೋನಿ(35) ಬಂಧಿತ ಆರೋಪಿ ಎಂದು ಡಿಸಿಪಿ ಹರೀಶ್ಪಾಂಡೆ ತಿಳಿಸಿದ್ದಾರೆ.
ಆರೋಪಿಯು ಬೈರಸಂದ್ರದ ವಾಟರ್ಟ್ಯಾಂಕ್ ರಸ್ತೆಯಲ್ಲಿ ಸ್ಕೂಟರ್ನಲ್ಲಿ ಬಂದು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿದ ಸಿದ್ದಾಪುರ ಠಾಣಾ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಪಾಸ್ಪೋರ್ಟ್, ವೀಸಾ ಪರಿಶೀಲನೆ ನಡೆಸಲಾಗಿದ್ದು, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿರುವುದು ಕಂಡು ಬಂದಿದೆ. ಈತನಿಂದ ಕೊಕೇನ್, ಎಂಡಿಎಂಎ, ಸ್ಕೂಟರ್ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Next Story