Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಪ್ರಧಾನಿ ಮೋದಿಯ ಪರಿಕಲ್ಪನೆ ಪಾಲಿಸುವಲ್ಲಿ...

ಪ್ರಧಾನಿ ಮೋದಿಯ ಪರಿಕಲ್ಪನೆ ಪಾಲಿಸುವಲ್ಲಿ ರಾಜ್ಯ ಸರಕಾರ ವಿಫಲ: ಅನ್ವರ್ ಮಾಣಿಪ್ಪಾಡಿ

ವಾರ್ತಾಭಾರತಿವಾರ್ತಾಭಾರತಿ6 Dec 2021 7:46 PM IST
share
ಪ್ರಧಾನಿ ಮೋದಿಯ ಪರಿಕಲ್ಪನೆ ಪಾಲಿಸುವಲ್ಲಿ ರಾಜ್ಯ ಸರಕಾರ ವಿಫಲ: ಅನ್ವರ್ ಮಾಣಿಪ್ಪಾಡಿ

ಬೆಂಗಳೂರು, ಡಿ.6: ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯನ್ನು ಪಾಲಿಸುವಲ್ಲಿ ರಾಜ್ಯದ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಫಜ್ರ್ ಕ್ಲಬ್ ಆಫ್ ಇಂಡಿಯಾ ಸಂಚಾಲಕ ಅನ್ವರ್ ಮಾಣಿಪ್ಪಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಪಕ್ಷದ ವಕ್ತಾರ ಅಂದಮಾತ್ರಕ್ಕೆ ಪಕ್ಷದಲ್ಲಿ ನಡೆಯುವ ತಪ್ಪುಗಳನ್ನು ವಿರೋಧಿಸಬಾರದು ಎಂದು ಇದೆಯೇ? ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡದೆಯೇ ಪಕ್ಷದ ಒಳಗಿದ್ದುಕೊಂಡೆ ನಮ್ಮ ಸಮುದಾಯದ ಹಕ್ಕುಗಳ ಪರವಾಗಿ ಧ್ವನಿ ಎತ್ತುವುದು ನಮಗೆ ಗೊತ್ತಿದೆ ಎಂದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಅವರ ಹಕ್ಕುಗಳಿಂದ ವಂಚಿತರನ್ನಾಗಿಸುತ್ತಿರುವ ಬಗ್ಗೆ ನಾನು ಈಗಾಗಲೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಂಘ ಪರಿವಾರದ ಮುಖಂಡರ ಗಮನಕ್ಕೂ ತಂದಿದ್ದೇನೆ. ಹಲವು ಪತ್ರಗಳನ್ನು ಬರೆದಿದ್ದೇನೆ. ಆದರೆ, ಈ ಸಂಬಂಧ ಯಾವುದೆ ಕ್ರಮಗಳು ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎಸ್ಸಿ-ಎಸ್ಟಿ ಶೇ.22, ಮುಸ್ಲಿಮರು ಶೇ.18.5, ಹಿಂದುಳಿದ ವರ್ಗದವರು ಶೇ.16, ಲಿಂಗಾಯತರು ಶೇ.14, ಒಕ್ಕಲಿಗರು ಶೇ.12, ಕುರುಬರು ಶೇ.9 ಹಾಗೂ ಈಡಿಗ, ಬ್ರಾಹ್ಮಣ, ಕ್ರೈಸ್ತರು ಶೇ.3ರಷ್ಟು ಇದ್ದಾರೆ. ಆದರೆ, ಎಲ್ಲ ಸಮುದಾಯದವರು ಮುಖ್ಯಮಂತ್ರಿಯನ್ನು ಹೊಂದಿದ್ದಾರೆ. ಆದರೆ, ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಎಂಬುದು ಮರೀಚಿಕೆಯಾಗಿದೆ. ನಾವು ಶಾಂತ ರೀತಿಯ ಹೋರಾಟದಿಂದ ಬೀದಿಗಿಳಿದು ಹೋರಾಟ ಮಾಡಿ, ನಮ್ಮ ಹಕ್ಕುಗಳನ್ನು ಪಡೆಯುತ್ತೇವೆ. ಯಾವುದೆ ರೀತಿಯ ಹಿಂಸೆ, ಪ್ರಚೋದನೆಗೆ ನಮ್ಮ ಹೋರಾಟದಲ್ಲಿ ಆಸ್ಪದ ಇರುವುದಿಲ್ಲ ಎಂದು ಅವರು ಹೇಳಿದರು.

ಮುಸ್ಲಿಮರು ಹಿಂಜರಿಯುತ್ತಿದ್ದೇವೆ ಅಥವಾ ಕಿರುಕುಳ ಅನುಭವಿಸುತ್ತಿದ್ದೇವೆ. ನಮ್ಮ ನಡುವೆ ಅಭದ್ರತೆಯ ಭಾವನೆ ಮೂಡುತ್ತಿದೆ. ಅದರಲ್ಲೂ ನನಗೆ ವೈಯಕ್ತಿಕವಾಗಿ ಸರಕಾರದ ಈ ಧೋರಣೆಯನ್ನು ಬಹಳ ಹತ್ತಿರದಿಂದ ಅನುಭವಿಸಲು ಸಾಧ್ಯವಾಗಿದೆ. ನಾನು ಸರಕಾರ ಮತ್ತು ಅದರ ಕಾರ್ಯಾಚರಣೆಗಳ ನಡುವೆ ಇದ್ದುದ್ದರಿಂದ ಸಮುದಾಯದ ನನ್ನ ಸಹೋದರರಿಗಿಂತ ಹೆಚ್ಚಾಗಿ ನಾನು ಇದನ್ನು ಅನುಭವಿಸಿದ್ದೇನೆ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದರು.

ಶಾಫಿ ಸಅದಿ ವಿರುದ್ಧ ಕಿಡಿ: ರಾಜ್ಯ ವಕ್ಫ್ ಬೋರ್ಡ್‍ನ ನೂತನ ಅಧ್ಯಕ್ಷ ಶಾಫಿ ಸಅದಿ ವಿರುದ್ಧ ನಾನು ಯಾವುದೆ ಆರೋಪವನ್ನು ಮಾಡಿಲ್ಲ. ಆತ ಮಾಡಿರುವ ವಂಚನೆಯನ್ನು ದಾಖಲೆ ಸಮೇತ ಹೈಕೋರ್ಟ್, ಲೋಕಾಯುಕ್ತದ ಮುಂದಿಡಲಾಗಿದೆ. ಆದರೂ, ಆತನನ್ನು ರಕ್ಷಿಸಲು ಈ ಸರಕಾರದಲ್ಲಿನ ಕೆಲ ಸಚಿವರು, ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಆತನ ವಂಚನೆಯನ್ನು ಕಂಡು ವಕ್ಫ್ ಬೋರ್ಡ್ ಸಿಇಒ ಆತನಿಗೆ ಶೋಕಾಸ್ ನೋಟಿಸ್ ನೀಡಿದ್ದರು ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದರು.

ಶಾಫಿ ಸಅದಿಯನ್ನು ವಕ್ಫ್ ಬೋರ್ಡ್‍ನ ಅಧ್ಯಕ್ಷರನ್ನಾಗಿ ಮಾಡಲು ಸರಕಾರ, ಕಾನೂನು ಸಚಿವ ಮಾಧುಸ್ವಾಮಿ, ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಅಡ್ವೊಕೇಟ್ ಜನರಲ್ ಎಲ್ಲರೂ ಪ್ರಯತ್ನ ಪಟ್ಟಿದ್ದಾರೆ. ಆದರೆ, ಆತ ಹೊರಗಡೆ ಬಂದು ನನಗೂ ಬಿಜೆಪಿ ಪಕ್ಷಕ್ಕೂ ಯಾವುದೆ ಸಂಬಂಧವಿಲ್ಲ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೂ, ಶಾಫಿ ಸಅದಿಗೆ ಸರಕಾರ ಯಾಕೆ ಮಣೆ ಹಾಕಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಕ್ಫ್ ಬೋರ್ಡ್ ಒಂದು ಶ್ರೀಮಂತ ಸಂಸ್ಥೆ. ಅದೇ ರೀತಿ, ಅತಿದೊಡ್ಡ ಭ್ರಷ್ಟ ಸಂಸ್ಥೆಯೂ ಹೌದು ಎಂದು ಅವರು ಟೀಕಿಸಿದರು.
ಮುಸ್ಲಿಮರಿಗೆ ಸ್ಮಶಾನ ಭೂಮಿ ನೀಡಲು ನಿರಾಕರಣೆ: ಬೆಂಗಳೂರಿನ ದೊಡ್ಡ ನಾಗಮಂಗಲದಲ್ಲಿ ಮುಸ್ಲಿಮರಿಗಾಗಿ ಸ್ಮಶಾನ ಭೂಮಿ ಕೊಡಿ

ಸಲು ಸುದೀರ್ಘ ಹೋರಾಟ ಮಾಡಿದ ಪರಿಣಾಮ 2005ರಲ್ಲಿ ನ್ಯಾಯಾಲಯದ ಆದೇಶದ ಮೂಲಕ ಎರಡು ಎಕರೆ ಭೂಮಿ ಮಂಜೂರಾಯಿತು. ಆದರೆ, ಇಲ್ಲಿಯವರೆಗೆ ಅದನ್ನು ನಮ್ಮ ವಶಕ್ಕೆ ದಾಖಲಿಸಲಿಲ್ಲ. ಕೋವಿಡ್‍ನಿಂದ ಮೃತಪಟ್ಟವರಿಗೆ ದಫನ್ ಮಾಡಲು ಪೇಚಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ, ಸರಕಾರ ಮಾತ್ರ ನಮ್ಮ ವಿಚಾರದಲ್ಲಿ ಬೇರೆ ರೀತಿಯಲ್ಲಿ ಯೋಚಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕ ಗ್ರಾಮದಲ್ಲಿ ಜುಮಾ ಮಸೀದಿಗೆ ನೀಡಿರುವ 20 ಸೆಂಟ್ಸ್ ಜಾಗವನ್ನು ಸ್ಮಶಾನಕ್ಕಾಗಿ ನೀಡಿದ್ದು, ಅಲ್ಲಿ ಮೃತರ ದಫನ್ ಕಾರ್ಯ ನೆರವೇರಿಸಲಾಗುತ್ತಿದೆ. ಈಗ ಸರಕಾರ ಈ ಸ್ಮಶಾನವನ್ನು ಅರಣ್ಯ ಭೂಮಿ ಎಂದು ಕಿತ್ತುಕೊಳ್ಳಲು ಬಯಸಿದೆ. ಅಲ್ಲದೆ, ನಮಗೆ ಸುತ್ತಮುತ್ತಲಿನ ಸಮಾಧಿ ಸ್ಥಳವನ್ನು ನೀಡಲು ನಿರಾಕರಿಸುತ್ತಿದೆ. ಇದು ಸಮುದಾಯದ ವಿರುದ್ಧ ಸೇಡು ತೀರಿಸಿಕೊಳ್ಳುವುದಲ್ಲದೆ ಇನ್ನೇನು ಎಂದು ಅವರು ಪ್ರಶ್ನಿಸಿದರು.

ಮಸೀದಿ ಮೇಲೆ ದಾಳಿ: ಬೆಂಗಳೂರಿನ ಸಂಜೀವಿನಿ ನಗರದಲ್ಲಿ ವಕ್ಫ್ ಬೋರ್ಡ್ ಹಾಗೂ ಬಿಬಿಎಂಪಿಯಿಂದ ಮಂಜೂರಾತಿ ಪಡೆದು ನಿರ್ಮಿಸಿದ ಮಸೀದಿಯಲ್ಲಿ ನಮ್ಮನ್ನು ಬಲವಂತದಿಂದ ಪ್ರಾರ್ಥನೆ ಸಲ್ಲಿಸದಂತೆ ಸ್ಥಳೀಯರು ತಡೆಯುತ್ತಿದ್ದಾರೆ. ಇದಕ್ಕೂ ಮುನ್ನ ಮಣ್ಣಿನ ಬೂಟು, ಪಾದರಕ್ಷೆಗಳೊಂದಿಗೆ ಮಸೀದಿಗೆ ನುಗ್ಗಿ ಅದರ ಪಾವಿತ್ರ್ಯತೆಯನ್ನು ಹಾಳು ಮಾಡಲಾಗಿತ್ತು. ಈ ಸಂಬಂಧ ನಾವು ಪೊಲೀಸರ ಬಳಿಗೆ ಹೋದರೆ ಅಲ್ಲಿನ ಪೊಲೀಸ್ ಇನ್‍ಸ್ಪೆಕ್ಟರ್ ಜಗದೀಶ್ ಕೆಟ್ಟದಾಗಿ ವರ್ತಿಸಿ ವಿಚಾರಣೆ ನಡೆಸಲು ನಿರಾಕರಿಸಿದರು. ಡಿಸಿಪಿ ಮತ್ತು ಎಸಿಪಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಠಾಣೆಗೆ ವಾಪಸ್ ಹೋಗುವಂತೆ ಸೂಚಿಸಿದರು. ಆದರೆ, ಇನ್‍ಸ್ಪೆಕ್ಟರ್ ಇನ್ನೂ ಅಸಭ್ಯವಾಗಿ ವರ್ತಿಸಿದ್ದರಿಂದ ಯಾವುದೆ ಪರಿಣಾಮ ಬೀರಲಿಲ್ಲ. ಸರಕಾರ ಇನ್ನೂ ನಿಷ್ಕ್ರಿಯವಾಗಿದೆ ಎಂದು ಅವರು ದೂರಿದರು.

ಮುಸ್ಲಿಮ್ ಸಮುದಾಯದ ಬಗೆಗಿನ ಸರಕಾರದ ಧೋರಣೆ ಯಾವ ರೀತಿಯಲ್ಲೂ ಪ್ರಶಂಸೆಗೆ ಅರ್ಹವಾಗಲು ಸಾಧ್ಯವಿಲ್ಲ. ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಸ್ಲಿಮರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಹಳಷ್ಟು ಪತ್ರಗಳ ಮತ್ತು ಮನವಿಗಳ ಮೂಲಕ ಪ್ರಸ್ತುತಪಡಿಸಿದ್ದೇವೆ. ಆದರೆ, ಯಾವುದೆ ಪ್ರಯೋಜನವಾಗಿಲ್ಲ ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದರು.

ಮೈಸೂರಿನಲ್ಲಿ ಸಾಲಕ್ಕಾಗಿ ಈದ್ಗಾವನ್ನು ಬ್ಯಾಂಕ್‍ನಲ್ಲಿ ಅಡಮಾನವಿಟ್ಟಿತ್ತು. ಈ ಬಗ್ಗೆ ಹೋರಾಟ ಮಾಡಿದ್ದರಿಂದ ಅಡಮಾನ ರದ್ದಾಯಿತು. ಕುಣಿಗಲ್‍ನಲ್ಲಿ ಈದ್ಗಾ ಮಾರಾಟ ಮಾಡಿ ಆ ಹಣದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಿದರೂ ಕಳೆದ ಹಲವು ವರ್ಷಗಳಿಂದ ಇನ್ನೂ ಅದರ ಲೆಕ್ಕಪತ್ರವನ್ನು ನೀಡಿಲ್ಲ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಫಜ್ರ್ ಕ್ಲಬ್ ಆಫ್ ಇಂಡಿಯಾದ ಕಾರ್ಯದರ್ಶಿ ಉಸ್ಮಾನ್ ಶರೀಫ್, ಟ್ರಸ್ಟಿ ಇರ್ಫಾನ್ ಮೇಖ್ರಿ, ಹೈಕೋರ್ಟ್‍ನ ಅಡ್ವೊಕೇಟ್ ಮುಹಮ್ಮದ್ ಮುಖ್ತಾರ್ ಅಹ್ಮದ್, ಮೌಲಾನ ಮುಹಮ್ಮದ್ ನಿಝಾಮುದ್ದೀನ್ ಖಾಸ್ಮಿ ಹಾಗೂ ಮುಜಾಹಿದ್ ಅಲಿ ಬಾಬಾ ಉಪಸ್ಥಿತರಿದ್ದರು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X