ವಿಕಲ ಚೇತನ ಮಹಿಳೆ ಮೇಲೆ ಎಎಸ್ಐ ಹಲ್ಲೆ ಪ್ರಕರಣ: ತನಿಖೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

ಬೆಂಗಳೂರು: ವಾಹನಗಳ ಟೋಯಿಂಗ್ ಮಾಡುತ್ತಿದ್ದ ಎಎಸ್ಐಗೆ ಕಲ್ಲು ಹೊಡೆದರು ಎಂದು ಆರೋಪಿಸಿ ವಿಕಲಚೇತನ ಮಹಿಳೆಯೊಬ್ಬರ ಮೇಲೆ ಬೂಟು ಕಾಲಲ್ಲಿ ಒದ್ದು ಹಲ್ಲೆ ಮಾಡಿರುವ ಪ್ರಕರಣದ ಕುರಿತು ತನಿಖೆ ನಡೆಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿರುವ ಅವರು, 'ಯಾರೇ ಆದರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಇದಕ್ಕೆ ಪೊಲೀಸರೂ ಹೊರತಾಗಿಲ್ಲ' ಎಂದು ಹೇಳಿದ್ದಾರೆ.
'ವಿಕಲಚೇತನ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ' ಎಂದು ತಿಳಿಸಿದರು.
Next Story





