ಬೆಂಗಳೂರು | ಈದ್ಗಾ ಮೈದಾನದ ವಿವಾದ: ಸಾರ್ವಜನಿಕ ಕಾರ್ಯಕ್ರಮಗಳಿಗೆ ಪೋಲಿಸ್ ಅನುಮತಿ ಕಡ್ಡಾಯ
ಬೆಂಗಳೂರು, ಜೂ.6: ಬಿಬಿಎಂಪಿಯ ಪಶ್ಚಿಮ ವಲಯದ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವು ಬಿಬಿಎಂಪಿ ಸ್ವತ್ತಾಗಿದ್ದು, ಪೋಲಿಸ್ ಅನುಮತಿಯನ್ನು ಪಡೆದು ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಹುದು ಎಂದು ಬಿಬಿಎಂಪಿ ತಿಳಿಸಿದೆ.
ಈ ಕುರಿತು ಸೋಮವಾರ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಮಾತನಾಡಿ, ವರ್ಷದಲ್ಲಿ ಎರಡು ಬಾರಿ ಅಂದರೆ ರಂಜಾನ್ ಮತ್ತು ಬಕ್ರೀದ್ ದಿನದಂದು ಮುಸಲ್ಮಾನರಿಗೆ ಸಾಮೂಹಿಕ ಪ್ರಾರ್ಥನೆಗಾಗಿ ಅವಕಾಶ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಅದರಂತೆ ಪಾಲಿಕೆ ನಡೆದುಕೊಂಡಿದೆ. ಹಾಗೆಯೇ ಉಳಿದ ದಿನಗಳಲ್ಲಿ ಸಂಘಟನೆಗಳು ಸೇರಿದಂತೆ ಇತರರು ಪೋಲಿಸ್ ಅನುಮತಿಯನ್ನು ಪಡೆದು ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದು ಸ್ಪಷ್ಟಪಡಿಸಿದರು.
Next Story