BBMP ಚುನಾವಣೆ; ಶೇ.50 ಮೀರದಂತೆ ಮೀಸಲಾತಿ ನೀಡುವಂತೆ ಸರಕಾರ ಆದೇಶ
ಬೆಂಗಳೂರು, ಜೂ.10: ಬಿಬಿಎಂಪಿ ಚುನಾಯಿತ ಒಟ್ಟು ಸ್ಥಾನಗಳನ್ನು ಶೇ.50ರಷ್ಟು ಮೀರದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮಗಳಿಗೆ ತಿದ್ದುಪಡಿಯನ್ನು ಮಾಡಿ, ರಾಜ್ಯಪತ್ರವನ್ನು ಹೊರಡಿಸಲಾಗಿದೆ.
ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಒಟ್ಟು ಸ್ಥಾನ ಸಂಖ್ಯೆಯ ಮೂರನೆಯ ಒಂದರಷ್ಟು ಮೀರದಂತೆ ನೀಡಬೇಕು ಎಂದು ಅಧಿಸೂಚನೆ ಹೊರಡಿಸಲಾಗಿತ್ತು.
Next Story