ಪೊಲೀಸ್ ಸಿಬ್ಬಂದಿಗೆ ಕಿರುಕುಳ ಆರೋಪದ ಬೆನ್ನಲ್ಲೇ DCP ನಿಶಾ ಜೇಮ್ಸ್ ವರ್ಗಾವಣೆ
ನಿಶಾ ಜೇಮ್ಸ್-
ಬೆಂಗಳೂರು : ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಆರೋಪಗಳ ಸುರಿಮಳೆಯೇ ಗೈದಿರುವ ದೂರಿನ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ DCP ನಿಶಾ ಜೇಮ್ಸ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ನಿಶಾ ಜೇಮ್ಸ್ 2012ನೇ ಬ್ಯಾಚ್ IPS ಅಧಿಕಾರಿಯಾಗಿದ್ದರು. ಕಳೆದ 3 ವರ್ಷದಿಂದ ಕಮಿಷನರ್ ಕಚೇರಿ ಆಡಳಿತ ವಿಭಾಗದ DCP ಆಗಿದ್ದರು. ಇದೀಗ ನಿಶಾ ಜೇಮ್ಸ್ರನ್ನು ಆಂತರಿಕ ಭದ್ರತಾ ವಿಭಾಕ್ಕೆ SPಯಾಗಿ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಡಳಿತ ವಿಭಾಗ ಡಿಸಿಪಿ ಯಾಗಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಅವರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: 'ಕನ್ನಡ ಮಾತನಾಡುವ ಸಿಬ್ಬಂದಿ ಟಾರ್ಗೆಟ್': ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಎಡಿಜಿಪಿಗೆ ನೀಡಿದ ದೂರಿನ ಪತ್ರ ವೈರಲ್
Next Story