ಬೆಂಗಳೂರು | 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಶಿಕ್ಷಕಿ ವಿರುದ್ಧ FIR
ಬೆಂಗಳೂರು, ನ.9: ಬಹುಮಹಡಿ ಮೇಲಿಂದ ಬಿದ್ದು 10ನೇ ತರಗತಿ ವಿದ್ಯಾರ್ಥಿ ಮೊಹೀನ್ ಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧ ಶಾಲಾ ಶಿಕ್ಷಕಿ ವಿರುದ್ಧ ಇಲ್ಲಿನ ಸಂಪಗಿಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಪರೀಕ್ಷೆ ನಡೆಯುತ್ತಿದ್ದ ವೇಳೆ ನಕಲು ಮಾಡಿದ್ದ ಕಾರಣ ಮೊಹೀನ್ ಅನ್ನು ಕಂಡ ಶಿಕ್ಷಕಿ ತರಗತಿಯಿಂದಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ ಹನ್ನೊಂದು ಗಂಟೆಗೆ ಸ್ಕೂಲ್ನಿಂದ ಮೊಹೀನ್ ಹೊರಬಂದಿದ್ದನು. ಘಟನೆಯಿಂದ ಮನನೊಂದ ಮೊಹೀನ್ ಸಂಜೆ5 ಗಂಟೆ ವೇಳೆಗೆ ಸಿಗ್ನೇಚರ್ ಅಪಾರ್ಟ್ ಮೆಂಟ್ ನ ಹದಿನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ.
ಬಳಿಕ ಪೊಷಕರು ನೀಡಿರುವ ದೂರಿನ್ವಯಸಂಪಿಗೆಹಳ್ಳಿ ಠಾಣಾ ಪೊಲೀಸರು ಶಿಕ್ಷಕಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
Next Story