ವಂದೇ ಭಾರತ್ ಎಕ್ಸ್ ಪ್ರೆಸ್ | ಬೆಂಗಳೂರು-ಮೈಸೂರು ಪ್ರಯಾಣ ದರ ಎಷ್ಟು? ಇಲ್ಲಿದೆ ವಿವರ
ಬೆಂಗಳೂರು, ನ.11: ಚೆನ್ನೈ-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಸೆಮಿಸ್ಪೀಡ್ ರೈಲು ‘ವಂದೇ ಭಾರತ್ ಎಕ್ಸ್ ಪ್ರೆಸ್’ಗೆ (Vande Bharat Express) ಶುಕ್ರವಾರ ಬೆಂಗಳೂರಿನಲ್ಲಿ ಚಾಲನೆ ದೊರಕಿದ್ದು, ಮೈಸೂರು ಹಾಗೂ ಬೆಂಗಳೂರುವರೆಗಿನ ಚೇರ್ಕಾರ್(ಸಿಸಿ) ಪ್ರಯಾಣಕ್ಕೆ ಉಪಹಾರ ಸೇರಿ 720 ರೂ. ನಿಗದಿ ಮಾಡಲಾಗಿದೆ.
ಮೈಸೂರು ಹಾಗೂ ಬೆಂಗಳೂರುವರೆಗಿನ ಎಕ್ಸಿಕ್ಯೂಟಿವ್ ಚೇರ್ ಕಾರ್(ಇಸಿ)ಪ್ರಯಾಣಕ್ಕೆ 1,215 ರೂ.ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಚೇರ್ ಕಾರ್ ನಲ್ಲಿ 515 ರೂಪಾಯಿ ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ ಪ್ರಯಾಣಕ್ಕೆ 985 ದರ ಇದೆ.
ಚೆನ್ನೈನಿಂದ ಮೈಸೂರಿಗೆ ಚೇರ್ ಕಾರ್ ನಲ್ಲಿ ಹಾಗೂ ಎಕ್ಸಿಕ್ಯೂಟಿವ್ ಚೇರ್ ನಲ್ಲಿ ಕ್ರಮವಾಗಿ 1,200 ರೂಪಾಯಿ ಹಾಗೂ 2,295 ರೂ.ಇದೆ. ಮೈಸೂರಿನಿಂದ ಚೆನ್ನೈಗೆ ಸಿಸಿ ಹಾಗೂ ಇಸಿ ಕೋಚ್ಗಳಲ್ಲಿ ಕ್ರಮವಾಗಿ 1,365 ರೂಪಾಯಿ ಹಾಗೂ 2,485 ರೂ.ಇದೆ.
ಟಿಕೆಟ್ ಬುಕ್ಕಿಂಗ ಹೇಗೆ?: ಐಆರ್ಸಿಟಿಯ ವೆಬ್ಸೈಟ್ಲ್ಲಿ ಅಥವಾ ಆ್ಯಪ್ನಲ್ಲಿ ಸಾಮಾನ್ಯ ರೈಲ್ವೇ ಟಿಕೆಟ್ಗಳನ್ನು ಖರೀದಿ ಮಾಡಿದಂತೆ ಮಾಡಬಹುದು. ರೈಲ್ವೆ ಸೇವೆ ಒದಗಿಸುವ ಥರ್ಡ್ ಪಾರ್ಟಿ ಅಪ್ಲಿಕೇಶನ್ನಲ್ಲಿಯೂ ಟಿಕೆಟ್ ಬುಕ್ ಮಾಡಬಹುದು. ಈಗಾಗಲೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ.
ಈ ರೈಲು ಮುಂಜಾನೆ 5.50ಕ್ಕೆ ಚೆನ್ನೈನಿಂದ ಹೊರಡಲಿದ್ದು, (ಗಾಡಿ ಸಂಖ್ಯೆ 20607) ಬೆಳಗ್ಗೆ 10.20ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 12.20ಕ್ಕೆ ಮೈಸೂರು ತಲುಪಲಿದೆ. ಚೆನ್ನೈನಿಂದ ಮೈಸೂರು ತಲುಪಲು 6 ಗಂಟೆ 30 ನಿಮಿಷ ಗಂಟೆ ಸಮಯ ತೆಗೆದುಕೊಳ್ಳಲಿದೆ.
ಮೈಸೂರಿನಿಂದ( ಗಾಡಿ ಸಂಖ್ಯೆ 20608) ಮಧ್ಯಾಹ್ನ 1.05ಕ್ಕೆ ಹೊರಡಲಿದ್ದು, ಮಧ್ಯಾಹ್ನ 2.55ಕ್ಕೆ ಬೆಂಗಳೂರಿಗೆ ಬರಲಿದೆ. ಸಂಜೆ 7.30ಗೆ ಚೆನ್ನೈಗೆ ತಲುಪಲಿದೆ. ಮೈಸೂರಿನಿಂದ ಚೆನ್ನೈಗೆ ತಲುಪಲು 6 ಗಂಟೆ 35 ನಿಮಿಷ ತೆಗೆದುಕೊಳ್ಳಲಿದೆ. ಈ ಸೆಮಿಸ್ಪೀಡ್ ರೈಲು ಬುಧವಾರ ಹೊರೆತುಪಡಿಸಿ ವಾರದ ಆರು ದಿನ ಚೆನ್ನೈ ಹಾಗೂ ಮೈಸೂರು ನಡುವೆ ಕಾರ್ಯಾಚರಣೆ ಮಾಡಲಿದೆ. ಕಟಪಾಡಿ ಹಾಗೂ ಬೆಂಗಳೂರಿನಲ್ಲಿ ರೈಲು ನಿಲ್ಲಲಿದೆ ಎಂದು ನೈಋತ್ಯ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.