'ಕೆರಳಿದ' ಲಿಯೊನೆಲ್ ಮೆಸ್ಸಿಯನ್ನು ರಸ್ತೆ ಜಾಗೃತಿಗೆ ಬಳಸಿದ ಬೆಂಗಳೂರು ಸಿಟಿ ಪೊಲೀಸ್!
ನೆಟ್ಟಿಗರ ಮೆಚ್ಚುಗೆ
ಬೆಂಗಳೂರು: ಫಿಫಾ ವಿಶ್ವಕಪ್ ಅರ್ಜೇಂಟಿನಾ ಪಾಲಾದ ಬಳಿಕ ಎಲ್ಲೆಡೆಯೂ ಅದರ ಕ್ಯಾಪ್ಟನ್ ಲಿಯೊನೆಲ್ ಮೆಸ್ಸಿ (Lionel Messi) ರಾರಾಜಿಸುತ್ತಿದ್ದಾರೆ. ಈ ನಡುವೆ, ಬೆಂಗಳೂರು ಸಿಟಿ ಪೊಲೀಸರು (BengaluruCityPolice) ಮೆಸ್ಸಿಯ ವಿಡಿಯೋ ತುಣುಕೊಂದು ಬಳಸಿ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.
ರಸ್ತೆಗಳಲ್ಲಿ ವಾಹನ ಸವಾರರು ಪರಸ್ಪರ ಜಗಳವಾಡದಂತೆ ಜಾಗೃತಿ ನಡೆಸಲು ಬೆಂಗಳೂರು ಪೊಲೀಸರು ಮೆಸ್ಸಿಯ ವಿಡಿಯೋ ತುಣುಕನ್ನು ಬಳಸಿದ್ದಾರೆ.
ಮೆಸ್ಸಿ ಕೋಪಗೊಂಡಿರುವ ವಿಡಿಯೋ ತುಣುಕು ಬಳಸಿಕೊಂಡ ಬೆಂಗಳೂರು ಪೊಲೀಸರು, "ನಿನ್ನನ್ನು ಯಾರು ನೋಯಿಸಿದರು ಬ್ರೋ (ಸಹೋದರ). ಬೆಂಗಳೂರು ಸಿಟಿ ಪೊಲೀಸರ ಪ್ರೀತಿಯ ಅಪ್ಪುಗೆ ಇಲ್ಲಿದೆ." ಎಂದು ಮೆಸ್ಸಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ, ವಾಹನ ಸಂಚಾರರಿಗೆ ʼದಯವಿಟ್ಟು ಬೀದಿಗಳಲ್ಲಿ ಶಾಂತವಾಗಿರಿ ಮತ್ತು ನಾಗರಿಕರಾಗಿ ವರ್ತಿಸಿʼ ಎಂದು ಸಲಹೆಯನ್ನೂ ನೀಡಿದ್ದಾರೆ.
ಬೆಂಗಳೂರು ಪೊಲೀಸರ ಈ ಮಾರ್ಮಿಕ ಜಾಗೃತಿಯನ್ನು ಹಲವು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Who hurt you bro? Here is a hug from Bengaluru City Police
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) December 19, 2022
Let’s please stay calm and civil on the streets #JustBCPThings pic.twitter.com/xl2T6PrAPb
Wow...you certainly have a young creative team who is smart and creating memes to give positive message to the public.
— Ganesh Shakthi (@ganesh_shakthi) December 19, 2022
Can you please do a YouTube Live with the Bangalore users on how your team works tirelessly? Of late, we bring a lot of issues to you!
your social media team certainly has a sense of humor.
— Wolf Girl (@W01fGirl) December 19, 2022