ಬೆಂಗಳೂರು: ಎಮ್ಮೆಗಳ ವಿರುದ್ಧ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ ಇಂಜಿನಿಯರ್ಗಳು!
ಬೆಂಗಳೂರು,ಜ.22: ಎಮ್ಮೆಗಳು ತೊಂದರೆ ಕೊಡುತ್ತಿವೆ ಎಂದು ನಗರದಲ್ಲಿ ಎಮ್ಮೆಗಳ ವಿರುದ್ಧ ಸಾಫ್ಟ್ವೇರ್ ಇಂಜಿನಿಯರ್ಗಳು ದೂರು ನೀಡಿರುವ ಘಟನೆ ನಡೆದಿದೆ.
ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಬೆಳಿಗ್ಗೆ ಕಚೇರಿಗೆ ಹೋಗುವಾಗ ನಗರದ ಕಸವನಹಳ್ಳಿ ರಸ್ತೆಯಲ್ಲಿ ಪ್ರತಿನಿತ್ಯ ಎಮ್ಮೆಗಳು ಸರತಿ ಸಾಲಿನಲ್ಲಿ ಮಾರ್ಚ್ ಫಾಸ್ಟ್ ಮಾಡುತ್ತಾ ರೋಡ್ನಲ್ಲಿ ಹೋಗುತ್ತಿವೆ. ಇದರಿಂದ ದಿನನಿತ್ಯ 45 ನಿಮಿಷ ಟ್ರಾಫಿಕ್ ಜಾಮ್ ಆಗುತ್ತಿದ್ದು, ಟೆಕ್ಕಿಗಳು ಹೈರಾಣಾಗಿ ಹೋಗಿದ್ದಾರೆ.
ಈ ಹಿನ್ನೆಲೆ ಬಹುರಾಷ್ಟ್ರೀಯ ಕಂಪನಿಯ ಟೆಕ್ಕಿಗಳು ಕಳೆದ 6-7 ತಿಂಗಳಿಂದ ಎಮ್ಮೆ ಸಮ್ಯಸೆಯಿಂದ ಟ್ರಾಫಿಕ್ ಜಾಮ್ ಆಗಿ ಕಚೇರಿಗೆ ನಿತ್ಯ ತಡವಾಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಟ್ವೀಟರ್ನಲ್ಲಿ ಸಂಚಾರ ಪೊಲೀಸ್ ಸೇರಿದಂತೆ ಶಾಸಕ ಅರವಿಂದ ಲಿಂಬಾವಲಿ, ಪಶುಸಂಗೋಪನಾ ಇಲಾಖೆ, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
Daily march of buffalos on #Kasavanahalli mainroad,choking entire peak traffic for 30mins. Just 2kms away from Wipro,Microsoft's of the world.All complaints to @ArvindLBJP @BBMPCOMM @hsrltrafficps yield nothing!#Lawless #Administration of #ITCorridor@DCPTrEastBCP@SplCPTraffic pic.twitter.com/rCmjRyy0Od
— SaveBellandur(ಬೆಳ್ಳಂದೂರು ಉಳಿಸಿ) (@kdevforum) January 20, 2023