''ಕೈ ಮುಗಿದು ಏರು, ಇದು ಕನ್ನಡದ ತೇರು...'': ಆಟೋ ಓಡಿಸುವ ವಿಡಿಯೋ ಹಂಚಿಕೊಂಡ ಡಿಕೆಶಿ
ಬೆಂಗಳೂರು, ಮಾ.23: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆಟೋ ರಿಕ್ಷಾ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಗುರುವಾರ ನಗರದ ಅರಮನೆ ಮೈದಾನದಲ್ಲಿ ಡಿ.ಕೆ ಶಿವಕುಮಾರ್ ಅವರು, ಆಟೋ ಚಾಲಕರ ಜೊತೆಗೆ ಸಂವಾದ ನಡೆಸಿ, ಬಳಿಕ ಆಟೋ ಚಾಲನೆ ಮಾಡಿದ್ದಾರೆ.
ಆಟೋ ಚಾಲನೆ ಮಾಡುವ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಡಿ.ಕೆ ಶಿವಕುಮಾರ್, ''ಕೈ ಮುಗಿದು ಏರು, ಇದು ಕನ್ನಡದ ತೇರು...'' ಎಂದು ಬರೆದುಕೊಂಡಿದ್ದಾರೆ.
'ಆಟೋ ಚಾಲಕರು ಬೆಂಗಳೂರಿನ ನರನಾಡಿಗಳಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಶ್ರೀಸಾಮಾನ್ಯರಿಗೆ ಆಪತ್ಕಾಲಕ್ಕಾಗುವ ಸ್ನೇಹಿತರಾಗಿದ್ದಾರೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಟೋ ಚಾಲಕರೊಂದಿಗೆ ಸಂವಾದ ನಡೆಸಿ, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವಿವರಿಸಿದೆ. ಅವರ ಬದುಕಿನಲ್ಲೂ ʼದೀಪಾವಳಿʼ ಬರಲಿದೆ' ಎಂದು ಭರವಸೆ ತುಂಬಿದೆ ಎಂದು ಡಿ.ಕೆ ಶಿವಕುಮಾರ್ ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕೈ ಮುಗಿದು ಏರು, ಇದು ಕನ್ನಡದ ತೇರು... pic.twitter.com/MC1lW8HJ1v
— DK Shivakumar (@DKShivakumar) March 23, 2023
Next Story