ವಾರ್ತಾ ಇಲಾಖೆ ನಿರ್ದೇಶಕರಾಗಿ ಡಿ.ಪಿ.ಮುರುಳೀಧರ್ ಗೆ ಮುಂಭಡ್ತಿ
ಬೆಂಗಳೂರು, ಮಾ. 29: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಡಿ.ಪಿ. ಮುರುಳೀಧರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಗ್ರೂಪ್ ‘ಎ’ ಹಿರಿಯ ಶ್ರೇಣಿಯ ನಿರ್ದೇಶಕರ ಹುದ್ದೆಗೆ ಮುಂಭಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
ಇದೇ ವೇಳೆ ಡಿ.ಪಿ.ಮುರುಳೀಧರ್ ಅವರ ವೇತನ ಶ್ರೇಣಿಯನ್ನು 82 ಸಾವಿರ ರೂ.ನಿಂದ 1,17,700 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತಾ ಅವರು ಆದೇಶ ಹೊರಡಿಸಿದ್ದಾರೆ.
Next Story