ಮಾ.9ರಿಂದ ದ್ವಿತೀಯ ಪಿಯು ಪರೀಕ್ಷೆ
ಬೆಂಗಳೂರು, ನ.3: 2016-17ನೆ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯು ಪ್ರಕಟಗೊಂಡಿದ್ದು, 2017 ಮಾ.9ರಿಂದ ಮಾ.27ರವರೆಗೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಪರೀಕ್ಷೆಯ ವೇಳಾ ಪಟ್ಟಿ
ಮಾ.9 -ಜೀವಶಾಸ್ತ್ರ, ಇತಿಹಾಸ,
ಮಾ.10- ಗಣಕ ವಿಜ್ಞಾನ, ಎಲೆಕ್ಟ್ರಾನಿಕ್ಸ್,
ಮಾ.11- ಕರ್ನಾಟಕ ಸಂಗೀತ, ಹಿಂದೂಸ್ಥಾನ ಸಂಗೀತ,
ಮಾ.13 ರಂದು ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ,
ಮಾ.14-ಗಣಿತ, ಮಾ.15-ಶಿಕ್ಷಣ, ತರ್ಕಶಾಸ್ತ್ರ,
ಮಾ.16- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ,
ಮಾ.17-ಭೌತಶಾಸ್ತ್ರ, ಮನಃಶಾಸ್ತ್ರ,
ಮಾ.18-ಸಂಸ್ಕೃತ, ಮರಾಠಿ, ಉರ್ದು, ಪ್ರೆಂಚ್,
ಮಾ.20-ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡೀಸ್,
ಮಾ.21-ರಾಜ್ಯಶಾಸ್ತ್ರ, ಮೂಲಗಣಿತ,
ಮಾ.22-ಹಿಂದಿ, ತೆಲುಗು,
ಮಾ.23-ಕನ್ನಡ, ತಮಿಳು, ಮಲಯಾಳಂ, ಅರೇಬಿಕ್,
ಮಾ.24-ಐಚ್ಚಿಕ ಕನ್ನಡ, ಗೃಹ ವಿಜ್ಞಾನ,
ಮಾ.25-ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ,
ಮಾ.27-ಇಂಗ್ಲಿಷ್ ಪರೀಕ್ಷೆಗಳು ನಡೆಯಲಿವೆ.
Next Story