ರಾಜ್ಯಪಾಲರಿಂದ ಯೋಗಥಾನ್ಗೆ ಚಾಲನೆ
ಬೆಂಗಳೂರು, ಜೂ.16: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳ ಇಲಾಖೆ ವತಿಯಿಂದ ಆಯೋಜಿಸುತ್ತಿರುವ 3ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಕಾರ್ಯಕ್ರಮವಾಗಿ ಯೋಗಥಾನ್ ಅನ್ನು ಜೂ.18ರಂದು ಬೆಳಗ್ಗೆ 7.30ಕ್ಕೆ (ಯೋಗ ನಡಿಗೆ) ರಾಜಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೆ ನಡೆಯಲಿದೆ.
ರಾಜ್ಯಪಾಲ ವಜುಭಾಯಿ ವಾಲಾ ಅಂದು ಬೆಳಗ್ಗೆ 7.30ಕ್ಕೆ ರಾಜಭವನದ ಮುಖ್ಯದ್ವಾರದಲ್ಲಿ ಯೋಗಥಾನ್ಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
Next Story