ಥಿಯೇಟರ್ನಲ್ಲಿ ಯಡವಟ್ಟು: KGF-2 ಬದಲು KGF-1 ಬಿಡುಗಡೆ!
ಕೆಜಿಎಫ್ -2 ಚಿತ್ರದ ಪೋಸ್ಟರ್
ಬೆಂಗಳೂರು: ಯಶ್ ನಟನೆಯ ಬಹು ನಿರೀಕ್ಷಿತ ಸಿನೆಮಾ ಕೆಜಿಎಫ್ -2 ಬುಧವಾರ ಮಧ್ಯರಾತ್ರಿ ಎಲ್ಲೆಡೆ ತೆರೆ ಕಂಡಿದ್ದು, ಬೆಂಗಳೂರಿನ ಥಿಯೇಟರ್ ಒಂದರಲ್ಲಿ ಸಿಬ್ಬಂದಿಯ ಯಡವಟ್ಟಿನಿಂದಾಗಿ ಕೆಜಿಎಫ್ ಚಾಪ್ಟರ್ 2 ಬದಲಿಗೆ ಚಾಪ್ಟರ್- 1 ಪ್ರದರ್ಶನಗೊಂಡಿರುವ ಪ್ರಸಂಗ ನಡೆದಿದೆ.
ಸಿನೆಮಾ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಸುಮಾರು 20 ನಿಮಿಷ ಕೆಜಿಎಫ್ ಚಾಪ್ಟರ್- 1 ಸಿನೆಮಾ ವೀಕ್ಷಿಸಿ ಥಿಯೇಟರ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಾಂತ್ರಿಕ ಸಮಸ್ಯೆಯಿಂದಾಗಿ ಹೀಗಾಗಿದೆ ಎಂದು ವೀಕ್ಷಕರಿಗೆ ಸಿಬ್ಬಂದಿ ಸ್ಪಷ್ಟನೆ ಕೊಟ್ಟಿದ್ದಾರೆ. ಬಳಿಕ 40 ನಿಮಿಷ ತಡವಾಗಿ ಕೆಜಿಎಫ್ ಚಾಪ್ಟರ್- 2 ಸಿನೆಮಾ ಪ್ರದರ್ಶನ ಆರಂಭವಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿರುವ ಕೆಜಿಎಫ್ -2 ಸಿನೆಮಾವನ್ನು ಸ್ವಾಗತಿಸಲು ಬೆಂಗಳೂರು ನಗರದ ಹಲವೆಡೆ ಅಭಿಮಾನಿಗಳು ಭಾರೀ ಸಿದ್ಧತೆ ನಡೆಸಿದ್ದು, ಚಿತ್ರಮಂದಿರಗಳ ಹೊರಭಾಗದಲ್ಲಿ ನಟ ಯಶ್ ಅವರ ಕಟೌಟ್ ಹಾಗೂ ಪೋಸ್ಟರ್ ಗಳು ಕಂಡು ಬಂತು.