ತಮಿಳು ಸಿನಿಮಾ ನಿರ್ದೇಶಕ ಅಟ್ಲೀಯೊಂದಿಗಿನ ಹೊಸ ಸಿನಿಮಾದ ಕುರಿತು ಘೋಷಣೆ ಮಾಡಿದ ಶಾರೂಖ್ ಖಾನ್

ಮುಂಬೈ: ಶಾರೂಖ್ ಖಾನ್ ಅಭಿಮಾನಿಗಳಿಗೆ ಸಂತಸ ತರುವಂತಹ ಸುದ್ದಿಯೊಂದನ್ನು ನಟ ಘೋಷಣೆ ಘೋಷಣೆ ಮಾಡಿದ್ದು, ತಮ್ಮ ಮುಂದಿನ ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ. ದಕ್ಷಿಣ ಭಾರತದ ತಮಿಳು ಚಿತ್ರರಂಗದಲ್ಲಿ ಮಿಂಚಿದ್ದ ಅಟ್ಲೀ ನಿರ್ದೇಶನದಲ್ಲಿ ನೂತನ ʼಜವಾನ್ʼ ಸಿನಿಮಾ ಮೂಡಿಬರಲಿದೆ. ಮುಖ್ಯಭೂಮಿಕೆಯಲ್ಲಿ ಶಾರೂಖ್ ಖಾನ್ ಜೊತೆಗೆ ನಯನತಾರಾ ನಟಿಸಲಿದ್ದಾರೆ. ಸಿನಿಮಾದ ಟೀಸರ್ ಅನ್ನೂ ಬಿಡುಗಡೆ ಮಾಡಲಾಗಿದ್ದು, ಸಿನಿಮಾವು ಜೂನ್ 2 ೨೦೨೩ ರಂದು ಬಿಡುಗಡೆಯಾಗಲಿದೆ ಎಂದು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮಾಹಿತಿ ನೀಡಿದೆ.
ವರದಿಗಳ ಪ್ರಕಾರ ಈ ಸಿನಿಮಾದಲ್ಲಿ ಶಾರೂಖ್ ಖಾನ್ ಡಬಲ್ ರೋಲ್ ಮಾಡಲಿದ್ದಾರೆ. ನಯನತಾರಾ ತನಿಖಾ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದಾರೆ. " ಶಾರೂಖ್ ಖಾನ್ ಮತ್ತು ಅಟ್ಲೀ ಸಂಯೋಜನೆಯಲ್ಲಿ ಜವಾನ್ ಸಿನಿಮಾವು ಜೂನ್ 2 2023ರಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ" ಸಾಮಾಜಿಕ ತಾಣದಲ್ಲಿ ಮಾಹಿತಿ ನೀಡಲಾಗಿದೆ. ಸಿನಿಮಾದಲ್ಲಿ ಭಾರತದಾದ್ಯಂತ ಹಲವು ಕಲಾವಿದರು ನಟಿಸಲಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ಶಾರುಖ್ ಖಾನ್, “ಜವಾನ್ ಒಂದು ಸಾರ್ವತ್ರಿಕ ಕಥೆಯಾಗಿದ್ದು ಅದು ಭಾಷೆಗಳು, ಭೌಗೋಳಿಕತೆಗಳನ್ನು ಮೀರಿದೆ ಮತ್ತು ಎಲ್ಲರೂ ಈ ಸಿನಿಮಾವನ್ನು ಆನಂದಿಸಬಹುದಾಗಿದೆ. ಈ ವಿಶಿಷ್ಟ ಚಲನಚಿತ್ರವನ್ನು ರಚಿಸಿದ ಕ್ರೆಡಿಟ್ ಅಟ್ಲೀ ಅವರಿಗೆ ಸಲ್ಲುತ್ತದೆ. ಇದು ನನಗೆ ಆಕ್ಷನ್ ಚಿತ್ರಗಳನ್ನು ಇಷ್ಟಪಡುವ ನನಗೆ ಅದ್ಭುತ ಅನುಭವವಾಗಿದೆ” ಎಂದು ಹೇಳಿದ್ದಾರೆ.
ಜವಾನ್ ನಿರ್ಮಾಣದ ಕುರಿತು ಮಾತನಾಡಿದ ನಿರ್ದೇಶಕ ಅಟ್ಲಿ, “ಜವಾನ್‌ನಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶೇಷತೆಗಳಿವೆ. ಅದು ಕ್ರಿಯೆಗಳು, ಭಾವನೆಗಳು, ನಾಟಕ ಎಲ್ಲವನ್ನೂ ಜೊತೆಯಾಗಿ ನೇಯ್ದ ದೃಶ್ಯ ಚಮತ್ಕಾರವನ್ನು ಸೃಷ್ಟಿಸುತ್ತದೆ. ಪ್ರೇಕ್ಷಕರಿಗೆ ಅಸಾಧಾರಣವಾದ ಅನುಭವವನ್ನು ನೀಡಲು ನಾನು ಬಯಸುತ್ತೇನೆ, ಅವರೆಲ್ಲರೂ ಒಟ್ಟಿಗೆ ಆನಂದಿಸಬಹುದಾಗಿದೆ" ಎಂದು ಹೇಳಿದ್ದಾರೆ.
Feeling emotional, excited & blessed .
— atlee (@Atlee_dir) June 3, 2022
Grew up admiring you but never imagined that I would be directing you sir.@iamsrk & I proudly present to you #Jawan https://t.co/UsquV4MRC8
Releasing on 2nd June 2023, in Hindi, Tamil, Telugu, Malayalam & Kannada@gaurikhan @RedChilliesEnt
Ready #JawanTeaser
— Thyview (@Thyview) June 3, 2022
2 JUNE 2023#ShahRukhKhan #Jawan @anirudhofficial @iamsrk pic.twitter.com/GLznHQAr2p
When @iamsrk and @atlee_dir come together, it’s bound to blow your mind
— Red Chillies Entertainment (@RedChilliesEnt) June 3, 2022
Get ready for the action entertainer #Jawan, in cinemas on 2nd June 2023!https://t.co/xMsMCKODFk
Releasing in Hindi, Tamil, Telugu, Malayalam and Kannada.@gaurikhan @VenkyMysore
An action-packed 2023!!⁰Bringing #Jawan to you, an explosive entertainer in cinemas 2nd June 2023.⁰In Hindi, Tamil, Telugu, Malayalam and Kannada.
— Shah Rukh Khan (@iamsrk) June 3, 2022
@gaurikhan @Atlee_dir @RedChilliesEnt https://t.co/3MWGKNwAwZ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.