ಆರ್‌ಆರ್‌ಆರ್ 'ಸಲಿಂಗಿ ಸಿನಿಮಾ' ಎಂದ ಪಾಶ್ಚಾತ್ಯರು, ರಾಮ್‌ಗೋಪಾಲ್ ವರ್ಮಾ: ಅಭಿಮಾನಿಗಳಿಂದ ತರಾಟೆ
-

ಹೊಸದಿಲ್ಲಿ: ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸಿನಲ್ಲಿ ಭಾರೀ ಗಳಿಕೆ ಕಂಡ ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ʼಆರ್‌ಆರ್‌ಆರ್ʼ ಕುರಿತು ಪಾಶ್ಚಾತ್ಯ ಸಿನೆಮಾ ವೀಕ್ಷಕರು ನೀಡಿರುವ ಪ್ರತಿಕ್ರಿಯೆ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ.
ಆರ್‌ಆರ್‌ಆರ್ ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ಮತ್ತು ರಾಮ್‌ಚರಣ್ ಅವರು ಗೆಳೆಯರಾಗಿ ಅಭಿನಯಿಸಿದ್ದು, ಇಬ್ಬರ ಬಾಂಧವ್ಯವನ್ನು ತೋರಿಸುವ ಹಲವು ದೃಶ್ಯಗಳು ಚಿತ್ರದಲ್ಲಿದೆ. ಇದೇ ದೃಶ್ಯಗಳನ್ನಿಟ್ಟುಕೊಂಡು ಹಲವು ಪಾಶ್ಚಾತ್ಯರು ʼಆರ್‌ಆರ್‌ಆರ್ʼ ಸಲಿಂಗಿ ಚಿತ್ರ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಖ್ಯಾತ ನರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದು, ಪಾಶ್ಚಾತ್ಯರು ʼಆರ್‌ಆರ್‌ಆರ್ʼ ಚಿತ್ರವನ್ನು ಸಲಿಂಗಿ ಚಿತ್ರ ಎನ್ನುತ್ತಿದ್ದಾರೆ, I was rightʼ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ, ಆರ್‌ಆರ್‌ಆರ್ ಚಿತ್ರ ಸಲಿಂಗಿ ಚಿತ್ರ ಎಂದು ಹೇಳಿದವರ ವಿರುದ್ಧ ಹಲವರು ಟೀಕಿಸಿದ್ದು, ಪುರುಷರ ನಡುವಿನ ಗೆಳತನವನ್ನು ಸಲಿಂಗ ಸಂಬಂಧ ಎಂದು ಕಾಣಬಾರದು ಎಂದು ಪ್ರತಿಕ್ರಿಯಿಸಿದ್ದಾರೆ. ನೋಡುವವರ ದೃಷ್ಟಿಕೋನಕ್ಕೆ ಸಂಬಂಧಿಸಿದೆ ಎಂದೂ ಹಲವರು ಹೇಳಿದ್ದಾರೆ.
ರಜತ್ ಎಂಬವರು ಪ್ರತಿಕ್ರಿಯಿಸಿ, ʼಪಾಶ್ಚಾತ್ಯ ಜನರಿಗೆ ಸ್ನೇಹ ಅಥವಾ ಗೆಳೆತನ ಏನೆಂದು ಗೊತ್ತಿಲ್ಲ, ಅವರು ಆರ್‌ಆರ್‌ಆರ್ ಅನ್ನು ಸಲಿಂಗ ಪ್ರೇಮ ಎಂದು ಪರಿಗಣಿಸಿದ್ದಾರೆʼ ಎಂದು ಟ್ವೀಟ್ ಮಾಡಿದ್ದಾರೆ.
“ನೀವು ಅಂದುಕೊಂಡಂತೆ (ಆರ್‌ಆರ್‌ಆರ್) ಸಲಿಂಗಕಾಮಿ ಪ್ರಣಯವಲ್ಲ. ಭೀಮನು ರಾಮನನ್ನು ಅಣ್ಣ/ಭಾಯ್ ಎಂದು ಕರೆಯುತ್ತಾನೆ.” ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್‌ದಾರೆ.
“ನಿಜ! ವ್ಯಕ್ತಿಗಳ ಗ್ರಹಿಕೆ ಅವರ ಸಂಸ್ಕೃತಿ, ಸುತ್ತಮುತ್ತಲ ವಾತಾವರಣ, ವೈಯಕ್ತಿಕ ನಡವಳಿಕೆಯ ಮಾದರಿಗಳು ಮತ್ತು ಅಭಿಪ್ರಾಯಗಳು ಇತ್ಯಾದಿಗಳ ಮೇಲೆ ಅವಲಂಬಿತವಾಗಿದೆ. ಆದರೆ ಭಾರತದಲ್ಲಿ ಅಥವಾ ಚೀನಾದಲ್ಲಿ ಸಂಸ್ಕೃತಿ ತುಂಬಾ ಪ್ರಬಲವಾಗಿದೆ ... ಅವರು ನಿದ್ರೆಯಲ್ಲೂ ಹಾಗೆ ಯೋಚಿಸುವುದಿಲ್ಲ! ಭಾರತದಲ್ಲಿ 99.9% ಜನರು ಹಾಗೆ ಯೋಚಿಸುವುದಿಲ್ಲ!” ಎಂದು ಹರಿಪ್ರಸಾದ್ ಎಂಬವರು ಟ್ವೀಟ್ ಮಾಡಿದ್ದಾರೆ.
I was right “They are so gay' Western audience's perception of 'RRR' as a gay story https://t.co/OxVDVr5Qsp
— Ram Gopal Varma (@RGVzoomin) June 2, 2022
True! Perception of individuals depends on their culture / surroundings / individual behaviour patterns / opinions etc ..
— Hari Prasad vanaparthi (@HariPra44439237) June 2, 2022
But in india / china ..where culture is very strong ... Even in sleep they won't think like that ! 99.9% in india won't think like that !
Jaw-dropping action, yes. Adventure, yes. Revenge, yes. But why did none of you tell me #RRRMovie was so heartwarmingly gay??
— Movie Bear Jim (@jjpoutwest) May 22, 2022
kick off pride month by watching the indian period gay romance action drama RRR on Netflix now pic.twitter.com/JprvRE2Aj8
— Advit (@rebelmooned) June 1, 2022
Just write 'RRR is a gay movie' in Google search engine.
— Pratik™ (@Thepratik10) May 26, 2022
Western viewers should have suffered from mental disease even they can't digest movie based on hardcore friendship of two male characters.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.