ನಿಮ್ಮೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ: ರಮ್ಯಾ ಟ್ವೀಟ್
ರಮ್ಯಾ
ಬೆಂಗಳೂರು: ಟ್ವಿಟರ್ ನಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ (Divya Spandana) ಅವರು ಸಿಹಿ ಸುದ್ದಿಯನ್ನು ಕೊಡುವುದಾಗಿ ಘೋಷಿಸಿದ್ದಾರೆ.
ಇಂದು (ಮಂಗಳವಾರ) ಟ್ವೀಟ್ ಮಾಡಿರುವ ಅವರು, 'ನಾಳೆ (ಆ.31) ಬೆಳಗ್ಗೆ 11.15ಕ್ಕೆ ನಾನೊಂದು ಸಿಹಿ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ಇದು ಅಧಿಕೃತ' ಎಂದು ಪ್ರಕಟಿಸಿದ್ದಾರೆ.
'ನಾನು ಕೈಗೊಳ್ಳಲಿರುವ ನಿರ್ಧಾರದ ಬಗ್ಗೆ ನೀವು ಯೋಚಿಸುವುದಿಲ್ಲವೇ? ' ಎಂದೂ ಅಭಿಮಾನಿಗಳಲ್ಲಿ ರಮ್ಯಾ ಪ್ರಶ್ನೆ ಮಾಡಿದ್ದಾರೆ.
ಇನ್ನು ಸದ್ಯ ರಮ್ಯಾ ಅವರು ರಾಜಕಾರಣದಿಂದ ದೂರ ಉಳಿದಿದ್ದು, ಸಿನೆಮಾ ರಂಗಕ್ಕೆ ಮತ್ತೆ ವಾಪಸ್ ಆಗಲಿದ್ದಾರೆ ಎಂದೂ ಹೇಳಲಾಗುತ್ತಿದ್ದು, ಅವರ ಟ್ವೀಟ್ ಗೆ ಹಲವರು ಶುಭ ಕೋರಿದ್ದಾರೆ.
— Divya Spandana/Ramya (@divyaspandana) August 30, 2022
Next Story