ತೆರೆಗೆ ಬಂದ 'ಬ್ರಹ್ಮಾಸ್ತ್ರ': ಅತಿಥಿ ಪಾತ್ರದಲ್ಲಿ ಶಾರುಖ್ರನ್ನು ಕಂಡು ರೋಮಾಂಚನಗೊಂಡ ಅಭಿಮಾನಿಗಳು
Photo: Twitter
ಹೊಸದಿಲ್ಲಿ: ಅಯನ್ ಮುಖರ್ಜಿ(Ayan Mukerji) ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ' (Brahmastra) ಬಿಡುಗಡೆಯಾಗಿದ್ದು, ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್, ತೆಲುಗಿನ ನಾಗಾರ್ಜುನ ಮತ್ತು ಮೌನಿ ರಾಯ್ (Ranbir Kapoor, Alia Bhatt, Amitabh Bachchan, Nagarjuna and Mouni Roy) ಸೇರಿದಂತೆ ಹಲವಾರು ದೊಡ್ಡ ಸ್ಟಾರ್ ಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಟ್ವಿಟರ್ ನೋಡಿ ಶಾರುಖ್ ಖಾನ್ (Shah Rukh Khan) ಕೂಡಾ ಈ ಚಿತ್ರದ ಭಾಗವಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದ್ದು, ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಶಾರುಖ್ ಕಾಣಿಸಿಕೊಂಡಿದ್ದಾರೆ.
ಬೆಳ್ಳಿ ಪರದೆಯಲ್ಲಿ ಶಾರುಖ್ ರನ್ನು ಕಂಡು ಅವರ ಅಭಿಮಾನಿಗಳು ರೋಮಾಂಚನೊಗೊಂಡಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಶಾರುಖ್ ಗುಣಗಾನ ಮಾಡಿದ್ದಾರೆ. ಟ್ವಿಟರಿನಾದ್ಯಂತ ಶಾರುಖ್ ಕುರಿತಾದ ಪೋಸ್ಟ್ ಗಳು ಹರಿದಾಡುತ್ತಿವೆ.
ಶಾರುಖ್ ರನ್ನು ಕಂಡು ರೋಮಾಂಚನಗೊಂಡ ಅಭಿಮಾನಿಯೊಬ್ಬರು, “ಶಾರುಖ್ ಖಾನ್ ಅವರನ್ನು ವರ್ಷಗಳ ನಂತರ ದೊಡ್ಡ ಪರದೆಯ ಮೇಲೆ ನೋಡಿದೆ. ನನ್ನ ಹೃದಯ ತುಂಬಿದೆ. SRK ಅಭಿಮಾನಿಗಳು ಇದನ್ನು ವೀಕ್ಷಿಸಲು ಉತ್ತಮ ಸಮಯವನ್ನು ಹೊಂದಿರುತ್ತಾರೆ. Missed you king” ಎಂದು ಬರೆದಿದ್ದಾರೆ.
ಶಾರುಖ್ ಖಾನ್ ಈ ವರ್ಷ ಹಲವು ಚಲನಚಿತ್ರಗಳಲ್ಲಿ ಬ್ಯಾಕ್-ಟು-ಬ್ಯಾಕ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ, ಮಾಧವನ್ ಅವರ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಮತ್ತು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಬ್ರಹ್ಮಾಸ್ತ್ರ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಝಿರೋ ಚಿತ್ರದ ಬಳಿಕ ಪೂರ್ಣ ಪ್ರಮಾಣದ ನಾಯಕನಟನಾಗಿ ಶಾರುಖ್ ಖಾನ್ ಚಿತ್ರ ಯಾವುದೂ ಬಿಡುಗಡೆಯಾಗಿರಲಿಲ್ಲ. ಶಾರುಕ್ ಅವರ ʼಪಠಾಣ್ʼ ಹಾಗೂ ʼಜವಾನ್ʼ ಚಿತ್ರ ಮುಂದಿನ ವರ್ಷ ತೆರೆಗೆ ಕಾಣಲಿದೆ.
ಇದನ್ನೂ ಓದಿ: ಸಂತ್ರಸ್ತೆಗೆ ನ್ಯಾಯ ದೊರಕಿಸುವುದು ಅಪರಾಧವೇ ಎಂದು ಉತ್ತರ ಪ್ರದೇಶ ಸರಕಾರಕ್ಕೆ ನ್ಯಾಯಾಲಯ ಪ್ರಶ್ನೆ
SRK Cameo in Brahmastra Moviemastra
— iamsrk_its_official(@saquib_srkian) September 9, 2022
Man is looking Dashing#ShahRukhKhan #ShahRukhKhan #Brahmastra #AyanMukerji #RanbirKapoor #AliaBhatt pic.twitter.com/ZKugCPOVpl
Seeing Shah Rukh Khan after years on the big screen. My heart is full.
— Aanchal Sharma (@AanchallSharma) September 9, 2022
SRK fans will have a good time watching this one.
Missed you King. #Brahmastra #ShahRukhKhan #RanbirKapoor