ಒಟಿಟಿಯಲ್ಲಿ ಕಾಂತಾರ: ವಿವಾದಾತ್ಮಕ ʼವರಾಹ ರೂಪಂʼ ಹಾಡಿನ ಟ್ಯೂನ್ ಬದಲಾವಣೆ; ಸಿನಿಪ್ರೇಮಿಗಳ ಅಸಮಾಧಾನ
-

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂತಾರ ಚಿತ್ರ ಅಮೇಝಾನ್ ಪ್ರೈಮ್ ನಲ್ಲಿ ನ. 24 ರಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ವರಾಹರೂಪಂ ಹಾಡಿನ ಟ್ಯೂನನ್ನು ಬದಲಿಸಿ ಒಟಿಟಿ ಪ್ಲಾಟ್ಫಾರ್ಮ್ ಅಲ್ಲಿ ಬಿಡುಗಡೆಗೊಳಿಸಲಾಗಿದೆ.
‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡಿನ ಟ್ಯೂನ್ ಅನ್ನು ಚೌರ್ಯ ಮಾಡಲಾಗಿದೆ, ಹಾಡಿನ ಮೂಲ ಟ್ಯೂನ್ ನಮ್ಮದು ಎಂದು ಕೇರಳ ಮೂಲದ thaikkudam bridge ಎಂಬ ಮ್ಯೂಸಿಕ್ ಬ್ಯಾಂಡ್ ಕೇರಳದ ಕೋರ್ಟಿನಲ್ಲಿ ದಾವೆ ಹೂಡಿತ್ತು. ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ಈ ಹಾಡನ್ನು ಪ್ರಸಾರ ಮಾಡದಂತೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ‘ಹೊಂಬಾಳೆ ಫಿಲ್ಮ್ಸ್’ ಕೇರಳ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ಚಿತ್ರತಂಡದ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗಿದ್ದು, ಈ ಕಾರಣದಿಂದ ಒಟಿಟಿ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಗೊಳಿಸುವಾಗ ಹಾಡಿನ ಟ್ಯೂನ್ ಬದಲಿಸಲಾಗಿದೆ.
ವಿವಾದಕ್ಕೊಳಗಾಗಿರುವ ಮೊದಲ ಟ್ಯೂನ್ ಅನ್ನು ಮೆಚ್ಚಿಕೊಂಡಿರುವ ಹಲವು ಸಿನಿ ಪ್ರೇಮಿಗಳು ನೂತನ ಆವೃತ್ತಿಯ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ಹೊರಹಾಕಿರುವ ನೆಟ್ಟಿಗರು ಮೊದಲು ಇದ್ದ ವರಾಹರೂಪಂ ಹಾಡು ಇಲ್ಲದೆ ಸಿನೆಮಾ ಸಪ್ಪೆ ಅನಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮೂಲ ವರಾಹರೂಪಂ ಇಲ್ಲದೆ ಬಿಡುಗಡೆಯಾದ ಕಾಂತಾರದಲ್ಲಿ ಅದರ ʼಆತ್ಮʼ ಇಲ್ಲದಂತಾಗಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ವರಾಹರೂಪಂ (ಹಳೆ ಆವೃತ್ತಿ)ಯನ್ನು ಕಳೆದುಕೊಂಡಿರುವುದು ಕಾಂತಾರ ಚಿತ್ರಕ್ಕೆ ತುಂಬಲಾರದ ನಷ್ಟ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ರಾಜಶೇಖರ್ ಎಂಬವರು ಪ್ರತಿಕ್ರಿಯಿಸಿ, "ಆ ಹಾಡಿನಲ್ಲಿ (ಹಳೆಯ ವರಾಹರೂಪಂ ದೈವಿಕ ಭಾವವಿತ್ತು. ತಪ್ಪಿತಸ್ಥರು ಯಾರೇ ಇರಲಿ, ಮೂಲ ಅನುಭವ ಈಗ ಕಳೆದುಕೊಂಡಿದ್ದೇವೆ" ಎಂದು ಬರೆದಿದ್ದಾರೆ. ಸಿದ್ದಾರ್ಥ ಎಂಬವರು ಪ್ರತಿಕ್ರಿಯಿಸಿ, "ವರಾಹರೂಪಂ ನ ಹೊಸ ಆವೃತ್ತಿಯನ್ನು ಥಿಯೇಟರುಗಳಲ್ಲಿ ಪ್ರದರ್ಶಿಸಿದ್ದರೆ, ಅದರ ಪರಿಣಾಮ ಹೀಗೆಯೇ ಇರುತ್ತಿತ್ತೇ?" ಎಂದು ಪ್ರಶ್ನಿಸಿದ್ದಾರೆ.
#Kantara without its soul #Varaharoopam..!!
— AB George (@AbGeorge_) November 24, 2022
No..!! pic.twitter.com/LLG3Pf1Dgx
#Kantara film had a soul that dragged audience to theatres and took them into divinity trance. And that is #VarahaRoopam Original Version & the theatre experience with #RishabShetty expressions was Dope.
— (@CineMaagic) November 24, 2022
Sadly, in #KantaraOnPrime we have to deal with new version. Disappointed pic.twitter.com/auV2CMFfQe
Dear @hombalefilms why you release this #Kantara on #AmazonPrime?You can take ur time and you can release the film after resolving the issue of #varaharoopam song,this version is not fitted,Plz stop this version streaming in #AmazonPrime,plz bring back #oldversionofvaraharoopam pic.twitter.com/KJS0GX1oeO
— kohlibhakt (@Pavancool06J) November 23, 2022
Great loss For #Kantara after loosing #varaharoopam pic.twitter.com/MjKo5bnJmJ
— Anantha Krishnan (@Iam_Ananantha) November 24, 2022
That song had a Divine feeling after an enthralling cinematic High act by @shetty_rishab . Whoever is the culprit, that feeling is ruined now. This issue could have been handled in a better way. @hombalefilms #varaharoopam #Kantara
— Rajashekar|ರಾಜಶೇಖರ್ (@Naanuraj) November 24, 2022
If #varaharoopam New Version was Played
— Sidಅರ್ಥ (@SidNeregal) November 24, 2022
in Theater from The Beginning Then, the
Impact Will be same ? #Kantara #KantaraMovie #RishabShetty #Kantaraott #varaharoopam #Kantaratelugu #Kantara pic.twitter.com/nwXMBbrtbi
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.