ಮುಂದಿನ ಬಾರಿ ಗಂಭೀರವಾಗಿ ಸಂಶೋಧನೆ ಮಾಡಿ: ವಿವೇಕ್ ಅಗ್ನಿಹೋತ್ರಿ, ಅನುರಾಗ್ ಕಶ್ಯಪ್ ನಡುವೆ ಟ್ವೀಟ್ ವಾರ್
-

ಮುಂಬೈ: ಚಿತ್ರ ತಯಾರಕ ಅನುರಾಗ್ ಕಶ್ಯಪ್ (Anurag Kashyap) ಅವರು ಇತ್ತೀಚಿನ ಚಲನಚಿತ್ರಗಳ ಬಗ್ಗೆ ನೀಡಿದ್ದರೆನ್ನಲಾದ ಹೇಳಿಕೆಗೆ ಆಕ್ಷೇಪಿಸಿ ʻThe Kashmir Filesʼ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ನೀಡಿದ ಹೇಳಿಕೆಯೊಂದು ಬುಧವಾರ ಇಬ್ಬರೂ ಚಿತ್ರ ತಯಾರಕರ ನಡುವೆ ಟ್ವೀಟ್ ವಾರ್‌ಗೆ ಕಾರಣವಾಯಿತು.
"ಕಾಂತಾರ ಮತ್ತು ಪುಷ್ಪಾ ಇವುಗಳಂತಹ ಚಲನಚಿತ್ರಗಳು ಚಿತ್ರೋದ್ಯಮವನ್ನು ನಾಶಗೊಳಿಸುತ್ತವೆ: ಅನುರಾಗ್ ಕಶ್ಯಪ್" ಎಂದು ಅನುರಾಗ್ ಕಶ್ಯಪ್ ಅವರು ಹೇಳಿದ್ದಾರೆನ್ನಲಾದ ಸಂದರ್ಶನದ ಸ್ಕ್ರೀನ್ ಶಾಟ್ ಒಂದನ್ನು ಅಗ್ನಿಹೋತ್ರಿ ಶೇರ್ ಮಾಡಿದ್ದರಲ್ಲದೆ "ನಾನು ಬಾಲಿವುಡ್‌ನ ಏಕೈಕ ಮೈಲಾರ್ಡ್‌ನೊಂದಿಗೆ ಈ ಕುರಿತು ಸಂಪೂರ್ಣವಾಗಿ ಒಪ್ಪುವುದಿಲ್ಲ," ಎಂದು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕಶ್ಯಪ್ "ಸರ್, ಇದು ನಿಮ್ಮ ತಪ್ಪಲ್ಲ. ನನ್ನ ಸಂದರ್ಶನಗಳ ಕುರಿತ ನಿಮ್ಮ ಟ್ವೀಟ್‌ಗಳಂತೆಯೇ ನಿಮ್ಮ ಚಲನಚಿತ್ರಗಳ ಸಂಶೋಧನೆಯೂ ಆಗಿದೆ. ನಿಮ್ಮ ಮತ್ತು ನಿಮ್ಮ ಮಾಧ್ಯಮದ ಸ್ಥಿತಿಯೂ ಅದೇ ಆಗಿದೆ, ಮುಂದಿನ ಬಾರಿ ಸ್ವಲ್ಪ ಗಂಭೀರ ಸಂಶೋಧನೆ ಮಾಡಿ,"ಎಂದು ತಿರುಗೇಟು ನೀಡಿದ್ದಾರೆ.
ಇದಕ್ಕೆ ಉತ್ತರಿಸಿದ ಅಗ್ನಿಹೋತ್ರಿ, ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ನಡೆಸಿದ ನಾಲ್ಕು ವರ್ಷದ ಸಂಶೋಧನೆ ಸುಳ್ಳು ಎಂದು ಸಾಬೀತು ಪಡಿಸಿ ಎಂದರಲ್ಲದೆ ಕಶ್ಯಪ್ ಅವರ ಇತ್ತೀಚೆಗೆ ಬಿಡುಗಡೆಗೊಂಡ ʼದೊಬಾರಾʼ ಚಿತ್ರವನ್ನು ಟಾರ್ಗೆಟ್ ಮಾಡಿದರು.
"ದಿ ಕಾಶ್ಮೀರ್ ಫೈಲ್ಸ್ ಎಲ್ಲಾ ಸುಳ್ಳು, ಗಿರಿಜಾ ಟಿಕೂ, ಬಿ ಕೆ ಗಂಜು, ನದಿಮಾರ್ಗ್ ಎಲ್ಲಾ ಸುಳ್ಳು, 700 ಪಂಡಿತರ ವೀಡಿಯೋಗಳೂ ಸುಳ್ಳು, ಹಿಂದುಗಳ್ಯಾರೂ ಸಾಯಲಿಲ್ಲ, ಇದನ್ನು ಸಾಬೀತುಪಡಿಸಿ ಮತ್ತು ನಾನು ದೊಬಾರಾ ಈ ತಪ್ಪು ಮಾಡದಂತೆ ನೋಡಿಕೊಳ್ಳಿ,ʼʼ ಎಂದು ಅಗ್ನಿಹೋತ್ರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
I totally totally totally disagree with the views of Bollywood’s one & only Milord.
— Vivek Ranjan Agnihotri (@vivekagnihotri) December 13, 2022
Do you agree? pic.twitter.com/oDdAsV8xnx
Sir aapki galti nahin hai, aap ki filmon ki research bhi aisi hi hoti hai jaise aapki mere conversations pe tweet hai. Aapka aur aapki media ka bhi same haal hai. Koi nahin next time thoda serious research kar lena .. https://t.co/eEHPrUeH9u
— Anurag Kashyap (@anuragkashyap72) December 14, 2022
Bholenath, aap lage haath sabit kar hi do ki #TheKashmirFiles ka 4 saal ka research sab jhooth tha. Girija Tikoo, BK Ganju, Airforce killing, Nadimarg sab jhooth tha. 700 Panditon ke video sab jhooth the. Hindu kabhi mare hi nahin. Aap prove kar do, DOBAARA aisi galti nahin hogi. https://t.co/jc5g3iL4VI
— Vivek Ranjan Agnihotri (@vivekagnihotri) December 14, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.