ರೂ. 700 ಕೋಟಿ ಬಾಚಿದ 'ಪಠಾಣ್': ಒಂದು ಕೋಟಿ ರೂ. ಗೆ ಬೇಡಿಕೆ ಇಟ್ಟ ಅಭಿಮಾನಿಗೆ ಶಾರೂಖ್ ಖಾನ್ ಹೇಳಿದ್ದೇನು?
-

ಶಾರೂಖ್ ಖಾನ್ (Photo: indiatoday.in)
ಮುಂಬೈ: 'ಪಠಾಣ್' ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಹತ್ತು ದಿನ ಕಳೆದು ಹೋಗಿದೆ. ಈ ಹತ್ತು ದಿನಗಳಲ್ಲಿ 'ಪಠಾಣ್' ಸಿನಿಮಾ ಜಾಗತಿಕವಾಗಿ ದಾಖಲೆಯ ರೂ. 700 ಕೋಟಿ ಗಳಿಸಿದೆ. 'ಪಠಾಣ್' ಸಿನಿಮಾ ಬಿಡುಗಡೆಯಾದ ದಿನದಿಂದ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶಾರೂಖ್ ಖಾನ್ ನೇರವಾಗಿ ಸಂವಾದಿಸುತ್ತಿದ್ದಾರೆ. ಅವರು ಶನಿವಾರ ಕೂಡಾ ಟ್ವಿಟರ್‌ನಲ್ಲಿ #AskSRK ಅವಧಿಯನ್ನು ಹಮ್ಮಿಕೊಂಡು ತಮ್ಮ ಅಭಿಮಾನಿಗಳೊಂದಿಗೆ ಸಂವಾದಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳ ಪ್ರಶ್ನೆಗೆ ತಮಾಷೆಯ ಉತ್ತರಗಳನ್ನು ನೀಡಿ, ತಮ್ಮ ಹಾಸ್ಯಪ್ರಜ್ಞೆ ಪ್ರದರ್ಶಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಓರ್ವ ಅಭಿಮಾನಿ 'ಪಠಾಣ್' ಸಿನಿಮಾ ಈವರೆಗೆ ಎಷ್ಟು ಗಳಿಕೆ ಮಾಡಿದೆ ಎಂಬ ಪ್ರಶ್ನೆಗೆ ಹಾಸ್ಯಭರಿತ ಉತ್ತರ ನೀಡಿರುವ ಶಾರೂಖ್ ಖಾನ್, "ಹ್ಹ.. ಹ್ಹ.. ಸೋದರ ತಮಾಷೆಯನ್ನು ಅನುಭವಿಸು, ಲೆಕ್ಕ ಹಾಕಬೇಡ..! ನನ್ನ ಬಳಿಯ ಕರೆನ್ಸಿ ಪರಿವರ್ತಕ ಕೆಲಸ ಮಾಡುತ್ತಿಲ್ಲ!!!" ಎಂದು ಚಟಾಕಿ ಹಾರಿಸಿದ್ದಾರೆ.
"ನಿಮ್ಮ ಸಿನಿಮಾದ ನಿಜವಾದ ಗಳಿಕೆಯೆಷ್ಟು?" ಎಂಬ ಮತ್ತೊಬ್ಬ ಅಭಿಮಾನಿಯ ಪ್ರಶ್ನೆಗೆ ಮತ್ತೆ ಕಾಲೆಳೆಯುವ ಉತ್ತರ ನೀಡಿರುವ ಶಾರೂಖ್ ಖಾನ್, "5,000 ಕೋಟಿ ಪ್ರೀತಿ, 3,500 ಕೋಟಿ ಮೆಚ್ಚುಗೆ, 3,,250 ಕೋಟಿ ಅಪ್ಪುಗೆ, 2 ಶತಕೋಟಿ ಮುಗುಳ್ನಗೆ ಮತ್ತು ಇನ್ನೂ ಲೆಕ್ಕ ಹಾಕುತ್ತಿದ್ದೇನೆ. ನಿಮ್ಮ ಲೆಕ್ಕಿಗ ಏನೆಂದು ಹೇಳುತ್ತಿದ್ದಾರೆ?" ಎಂದು ಪ್ರತಿಕ್ರಿಯಿಸಿದ್ದಾರೆ.
"ನಾನು ಈಗಾಗಲೇ ಐದು ಬಾರಿ 'ಪಠಾಣ್' ಸಿನಿಮಾ ನೋಡಿದ್ದೇನೆ. ಮುಂದೆ ಮತ್ತೆ ಐದು ಬಾರಿ ನೋಡಲು ಯೋಜಿಸಿದ್ದೇನೆ. ಹೀಗಾಗಿ, 'ಪಠಾಣ್' ಗಳಿಕೆಯಲ್ಲಿ ನನಗೂ ಪಾಲು ನೀಡುತ್ತೀರಾ?" ಎಂದು ಪ್ರಶ್ನಿಸಿರುವ ಮತ್ತೊಬ್ಬ ಅಭಿಮಾನಿಗೆ, "ಇಲ್ಲ! ಕೇವಲ ಮನರಂಜನೆ! ಮನರಂಜನೆ! ಮನರಂಜನೆ! ಮನರಂಜನೆ! ದುಡ್ಡಿಗಾಗಿ ಬೇರೆ ಕೆಲಸ ಮಾಡು! ಹ್ಹ.. ಹ್ಹ. #Pathan" ಎಂದು ಹಾಸ್ಯ ಮಾಡಿದ್ದಾರೆ.
"'ಪಠಾಣ್' ಸಿನಿಮಾದ ಗಳಿಕೆಗೆ ತಾನೂ ಕಾಣಿಕೆ ನೀಡಿರುವುದರಿಂದ ನನಗೆ ರೂ. ಒಂದು ಕೋಟಿ ನೀಡಿ" ಎಂಬ ಮತ್ತೊಬ್ಬ ಅಭಿಮಾನಿಯ ಬೇಡಿಕೆಗೆ, "ಸಹೋದರ, "ಇಷ್ಟು ಇಷ್ಟು ದರದ ಮರುಪಾವತಿ ಶೇರು ಮಾರುಕಟ್ಟೆಯಲ್ಲೂ ದೊರೆಯುವುದಿಲ್ಲ. ಇನ್ನೂ ಮತ್ತಷ್ಟು ಬಾರಿ ಸಿನಿಮಾ ನೋಡು.. ನಂತರ ನೋಡೋಣ! ಹ್ಹ.. ಹ್ಹ.. #Pathan" ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಮಲಯಾಳಂ ನಟ-ನಿರ್ದೇಶಕ ಬಾಬುರಾಜ್ ಬಂಧನ
Ha ha…..bhai joke feel karo calculate mat karo….my currency converter is not working!!! https://t.co/HRDENcUMwu
— Shah Rukh Khan (@iamsrk) February 4, 2023
Nahi…sirf entertainment…entertainment…entertainment. Paison ke liye koi kaam karo…ha ha. #Pathaan https://t.co/qbJ6TOzLXi
— Shah Rukh Khan (@iamsrk) February 4, 2023
5000 crores Pyaar. 3000 crore Appreciation. 3250 crores hugs….2 Billion smiles and still counting. Tera accountant kya bata raha hai?? https://t.co/P2zXqTFmdH
— Shah Rukh Khan (@iamsrk) February 4, 2023
Bhai itna rate of return nahi milta not even on share market. See it a few times more then let’s see…ha ha #Pathaan https://t.co/HUOh4sTKWY
— Shah Rukh Khan (@iamsrk) February 4, 2023
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.