ಬಿಗ್ ಬಾಸ್ 16 ಸೀಸನ್: ರ್ಯಾಪರ್ ಎಂ.ಸಿ.ಸ್ಟ್ಯಾನ್ ವಿನ್ನರ್
ಹೊಸದಿಲ್ಲಿ: ಭಾರಿ ಜಟಾಪಟಿ, ವಿವಾದಗಳು ಮತ್ತು ತಡೆರಹಿತ ನಾಟಕಕ್ಕೆ ಸಾಕ್ಷಿಯಾದ ಬಿಗ್ ಬಾಸ್ 16 ಸೀಸನ್ನ ನಾಲ್ಕು ತಿಂಗಳ ಪ್ರಯಾಣದಲ್ಲಿ ಎಂ.ಸಿ.ಸ್ಟ್ಯಾನ್ ವಿಜೇತರಾಗಿ ಹೊರಹೊಮ್ಮಿದ್ದು, ಟ್ರೋಫಿ ಎತ್ತಿ ಹಿಡಿದರು ಎಂದು timesofindia.com ವರದಿ ಮಾಡಿದೆ.
ರ್ಯಾಪ್ ಸ್ಟಾರ್ ಆದ ಎಂ.ಸಿ.ಸ್ಟ್ಯಾನ್, ಈ ಗೆಲುವಿನೊಂದಿಗೆ ರೂ. 31,80,000 ನಗದು ಹಾಗೂ ಹೊಚ್ಚ ಹೊಸ ಕಾರನ್ನು ತಮ್ಮೊಂದಿಗೆ ಕೊಂಡೊಯ್ದರು.
ಬಿಗ್ ಬಾಸ್ 16 ಸೀಸನ್ನಲ್ಲಿ ಶಿವ್ ಠಾಕರೆ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಪ್ರಿಯಾಂಕಾ ಚಾಹರ್ ಎರಡನೆಯ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟರು. ಅಂತಿಮ ಹಂತದಲ್ಲಿ ಒಟ್ಟು ಐದು ಸ್ಪರ್ಧಿಗಳಿದ್ದರು.
Next Story