ಸಲ್ಮಾನ್ ಜೊತೆ ನಟಿಸಲು ಐಶ್ವರ್ಯಾ ವಿಧಿಸಿದ ಷರತ್ತು ಏನು ಗೊತ್ತೇ?
ಮುಂಬೈ,ಅ.4 : ಹಿಂದಿ ಚಿತ್ರರಸಿಕರು ಹಮ್ ದಿಲ್ ದೇ ಚುಕೇ ಸನಂ ಚಿತ್ರದ ಸಲ್ಮಾನ್ ಖಾನ್ ಐಶ್ವರ್ಯಾ ರೈ ಜೋಡಿಯನ್ನು ಮರೆಯಲಿಕ್ಕೇ ಸಾಧ್ಯವಿಲ್ಲ. ಹಾಗಿತ್ತು ಅವರಿಬ್ಬರ ನಡುವಿನ ಕೆಮಿಸ್ಟ್ರಿ.ಈ ಚಿತ್ರದ ನಂತರ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ ಕೊನೆಗೆ ಸಲ್ಮಾನ್ ಮೊಂಡುತನದಿಂದ ಅವರಸಂಬಂಧ ಮುರಿದು ಬಿದ್ದಿದ್ದು ಈಗ ಇತಿಹಾಸ. ಅಂದಿನಿಂದ ಅವರಿಬ್ಬರು ದೂರ ದೂರವಾಗಿಯೇ ಉಳಿದು ಬಿಟ್ಟಿದ್ದರಲ್ಲದೆ ಯಾವುದೇ ಚಿತ್ರದಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.
ಈಗ ಐಶ್ವರ್ಯಾ ರೈ ಅಮಿತಾಭ್ ಬಚ್ಚನ್ ಕುಟುಂಬದ ಸೊಸೆಯಾಗಿ ಅಭಿಷೇಕ್ ಮಡದಿಯಾಗಿ ಐಶ್ವರ್ಯಾ ರೈ ಬಚ್ಚನ್ ಆಗಿ ಒಂದು ಮುದ್ದು ಹೆಣ್ಣು ಮಗುವಿನ ತಾಯಿಯೂ ಆಗಿದ್ದಾರೆ. ಐಶ್ವರ್ಯಾ ಇದೀಗ ಸಲ್ಮಾನ್ ಖಾನ್ ಅವರೊಂದಿಗೆ ಮತ್ತೆ ಸಿನೆಮಾದಲ್ಲಿ ಕಾಣಿಸಿಕೊಳ್ಳಲು ಸಿದ್ಧರಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ಸಲ್ಮಾನ್ ಜತೆ ನಟಿಸಲು ಐಶ್ವರ್ಯಾ ಷರತ್ತೊಂದನ್ನೂ ವಿಧಿಸಿದ್ದಾರೆ.ಚಿತ್ರ ಕಥೆ ಹಾಗೂ ನಿರ್ದೇಶನ ಅತ್ಯಧ್ಭುತವಾಗಿದ್ದರೆ ಮಾತ್ರ ತಾನು ಸಲ್ಮಾನ್ ಜತೆ ನಟಿಸುವುದಾಗಿ ಐಶ್ವರ್ಯಾತಮ್ಮ ಆಪ್ತ ವಲಯಗಳಲ್ಲಿ ಹೇಳಿಕೊಂಡಿದ್ದಾರೆಂಬ ಸುದ್ದಿಯಿದೆ.