Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಕಾನೂನುಗಳ ಉತ್ಪಾದನೆಗೆ ಬೃಹತ್...

ಕಾನೂನುಗಳ ಉತ್ಪಾದನೆಗೆ ಬೃಹತ್ ಕಾರ್ಖಾನೆಗಳ ನಿರ್ಮಾಣ!

ವಾರ್ತಾಭಾರತಿವಾರ್ತಾಭಾರತಿ14 Aug 2023 5:43 PM IST
share
ಕಾನೂನುಗಳ ಉತ್ಪಾದನೆಗೆ ಬೃಹತ್ ಕಾರ್ಖಾನೆಗಳ ನಿರ್ಮಾಣ!

‘‘ಹೊಸ ಹೊಸ ಕಾನೂನು...ಬಿಸಿ ಬಿಸಿ ಕಾನೂನು....’’ ಅಮೃತ ಕಾಲದ ರೈಲು ನಿಲ್ದಾಣದಲ್ಲಿ ಗ್ರಹ ಸಚಿವರು ಪಕೋಡಾ ಮಾರುತ್ತಿದ್ದರು.

ಕಾಸಿಗೆ ಕುತೂಹಲ. ಮಣಿಪುರದಲ್ಲಿ ಸಾಮೂಹಿಕ ಅತ್ಯಾಚಾರ, ಹಿಂಸಾಚಾರಗಳು ನಡೆಯುತ್ತಿವೆ. ಇಲ್ಲಿ ನೋಡಿದರೆ ಇವರು ಅಮೃತ ರೈಲು ನಿಲ್ದಾಣದಲ್ಲಿ ಪಕೋಡಾ ಮಾರುತ್ತಿದ್ದಾರೆ. ಕಾಸಿ ಮೆಲ್ಲಗೆ ಆ ಕಡೆ ಹೆಜ್ಜೆ ಹಾಕಿದ.

‘‘ಸಾರ್...ಇದೇನಿದು....ಹೊಸ ವ್ಯಾಪಾರ .....’’

‘‘ಅದೇ ದೇಶದ ಸುಭದ್ರತೆಗಾಗಿ ಹೊಸ ಹೊಸ ಬಿಸಿ ಬಿಸಿ ಕಾನೂನುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದೇವೆ....ದೇಶದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು. ಏಕತೆ, ಸಾರ್ವಭೌಮತೆ..ಸಮಗ್ರತೆ....’’ ಗ್ರಹ ಸಚಿವರು ತಿಳಿಸಿದರು.

‘‘ಇದೆಂತಹ ಪಕೋಡಾ ಸಾರ್...ಬ್ರಿಟಿಷ್ ಕಾಲದ ವಾಸನೆ ಬರುತ್ತಿದೆ....’’ ಕಾಸಿ ಮೂಸಿ ನೋಡಿ ಕೇಳಿದ.

‘‘ಹೇ...ಹಾಗೇನು ಇಲ್ಲ.... ಬ್ರಿಟಿಷ್ ಕಾಲದ ಪಕೋಡಾಗಳನ್ನು ಎಸೆದು ಹೊಸದಾಗಿ ಸ್ವದೇಶಿ ಎಣ್ಣೆಯಲ್ಲಿ ಮಾಡಿದ ಸ್ವದೇಶಿ ‘ದೇಶದ್ರೋಹ ವಿರೋಧಿ’ ಪಕೋಡಾಗಳು....ಈಗಷ್ಟೇ ಬಾಣಲೆಯಿಂದ ತೆಗೆದಿದ್ದೇವೆ....’’ ಗ್ರಹ ಸಚಿವರು ಗಡ್ಡ ಸವರಿ ಹೇಳಿದರು.

‘‘ಸಾರ್...ಈಗಾಗಲೇ ಬಾಣಲೆಯಲ್ಲಿ ಬೇಯುತ್ತಿರುವ ಸಾಮಾಜಿಕ ಹೋರಾಟಗಾರರು, ಪತ್ರಕರ್ತರನ್ನು ಏನು ಮಾಡುತ್ತೀರಿ....’’ ಕಾಸಿ ಅರ್ಥವಾಗದೆ ಕೇಳಿದ.

‘‘ಅವರನ್ನು ಹೊಸ ಬಾಣಲೆಯಲ್ಲಿ ಸ್ವದೇಶಿ ಎಣ್ಣೆಯಲ್ಲಿ ಹೊಸದಾಗಿ ಹಾಕಿ ಕರಿಯುತ್ತೇವೆ....ನೋಡಿ...ಪರಿಮಳ ಹೇಗೆ ಬರುತ್ತಿದೆ....?’’ ಗ್ರಹ ಸಚಿವರು ಮೂಗರಳಿಸಿದರು.

‘‘ಸಾರ್...ಹಳಸಿದ ವಾಸನೆ ಬರುತ್ತಿದೆ. ಎಣ್ಣೆ ಸ್ವದೇಶಿ ಹಾಕಿದ್ದರೂ ಹಳೆ ಬ್ರಿಟಿಷ್ ಕಾಲದ ಪಕೋಡವನ್ನೇ ಅರೆದು ಹೊಸದಾಗಿ ಮಾಡಿರುವ ಹಾಗಿದೆ....’’ ಕಾಸಿ ಕೇಳಿದ.

ಗ್ರಹ ಸಚಿವರ ಕಣ್ಣ ಕೆಂಪಾಯಿತು ‘‘ನೋಡಿ....ನಮ್ಮ ಸ್ವದೇಶಿ ಬಿಸಿಬಿಸಿ ಕಾನೂನಿನ ಪ್ರಕಾರ ನೀವು ಈಗ ಆಡಿದ ಮಾತು ದೇಶದ ಏಕತೆಗೆ, ಸಮಗ್ರತೆಗೆ ಧಕ್ಕೆ ತರುತ್ತದೆ. ನಿಮಗೆ ಜೀವಾವಧಿ ಶಿಕ್ಷೆಯಾಗಬಹುದು....’’ ಗ್ರಹ ಸಚಿವರು ಎಚ್ಚರಿಸಿದರು. ಕಾಸಿ ಬೆಚ್ಚಿ ಬಿದ್ದ. ‘‘ಕ್ಷಮಿಸಿ ಸಾರ್....ಸ್ವಲ್ಪ ಹಳಸಿದ ವಾಸನೆ ಬಂತು. ಅದಕ್ಕೆ ಹೇಳಿದೆ...ಈಗ ನೋಡಿದರೆ ಇದು ಸ್ವದೇಶಿ ಗಂಜಲದ ಪರಿಮಳ ಸಾರ್....ಚೆನ್ನಾಗಿದೆ....’’ ಎಂದು ಬಿಟ್ಟ.

ಗ್ರಹ ಸಚಿವರು ಸಮಾಧಾನವಾದರು.

‘‘ಸಾರ್...ಮಣಿಪುರದಲ್ಲಿ ಹಿಂಸಾಚಾರ, ಸಾಮೂಹಿಕ ಅತ್ಯಾಚಾರ ನಡೆಯುತ್ತಿದೆ....ಹರ್ಯಾಣದಲ್ಲಿ ಕೋಮುಗಲಭೆಗಳು ಸಂಭವಿಸಿವೆ....ದ್ವೇಷ ಭಾಷಣ ಹೆಚ್ಚಿವೆ....ಇವೆಲ್ಲ ದೇಶದ ಸಮಗ್ರತೆಗೆ ಧಕ್ಕೆ ತರುವುದಿಲ್ಲವೆ? ನಿಮ್ಮ ಹೊಸ ಸ್ವದೇಶಿ ಪಕೋಡಾವನ್ನು ಇವರೆಲ್ಲರಿಗೆ ಬಡಿಸಲಾಗುತ್ತದೆಯೆ?’’ ಕಾಸಿ ಕೇಳಿದ

‘‘ಹೆಹೆ...ಇವುಗಳಿಗೆಲ್ಲ ಹಿಂದಿನ ಕಾಂಗ್ರೆಸ್ ಸರಕಾರ ಕಾರಣ. ಇದಕ್ಕಾಗಿ ನಾವು ನೆಹರೂ ವಿರುದ್ಧ ಹೊಸ ಕಾನೂನುಗಳನ್ನು ಬಳಸಲಿದ್ದೇವೆ. ಸರ್ವ ಮೊಕದ್ದಮೆಗಳನ್ನು ನೆಹರೂ ವಿರುದ್ಧ ದಾಖಲಿಸಿ ಅವರನ್ನು ಜೈಲಿಗೆ ತಳ್ಳಲಿದ್ದೇವೆ....’’ ಗ್ರಹ ಸಚಿವರು ಹೇಳಿದರು.

‘‘ಸಾರ್...ಜೈಲಿಗೆ ತಳ್ಳಲು ಅವರು ಈಗ ಇಲ್ಲವಲ್ಲ....’’

‘‘ಇಲ್ಲದಿದ್ದರೇನಾಯಿತು? ಅವರ ವಂಶಸ್ಥರಿದ್ದಾರಲ್ಲ....ಅವರ ಮೇಲೆ ಕೇಸು ದಾಖಲಿಸಿ ಒಳತಳ್ಳಲಿದ್ದೇವೆ....’’

‘‘ಗೋಡ್ಸೆವಾದಿಗಳ ಮೇಲೆ ನಿಮ್ಮ ಕಾನೂನನ್ನು ಬಳಸಲಾಗುತ್ತದೆಯೆ?’’ ಕಾಸಿ ಅನುಮಾನದಿಂದ ಕೇಳಿದ.

‘‘ನೋಡಿ, ಗೋಡ್ಸೆಯನ್ನು ಬ್ರಿಟಿಷರ ಕಾಲದ ಕಾನೂನಿನ ಆಧಾರದಲ್ಲಿ ಗಲ್ಲಿಗೇರಿಸಲಾಗಿದೆ. ಇದು ನಿಜಕ್ಕೂ ತಪ್ಪು. ಗೋಡ್ಸೆ ಬ್ರಿಟಿಷರ ಕಡೆಗೆ ಹಾರಿಸಿದ ಗುಂಡು ಗುರಿ ತಪ್ಪಿ ಗಾಂಧಿಯ ಕಡೆಗೆ ಹಾರಿರಬಹುದು....ಕೆಲವೊಮ್ಮೆ ಇಂತಹ ಪ್ರಮಾದಗಳು ಆಗುತ್ತವೆ. ಗುಜರಾತ್ನಲ್ಲಿ ಕಾರು ವೇಗವಾಗಿ ಓಡುವಾಗ ನಾಯಿಮರಿ ಅಡ್ಡಬಂದದ್ದನ್ನು ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಹಾಗೆಯೇ ಗೋಡ್ಸೆ ಬ್ರಿಟಿಷರ ಕಡೆಗೆ ಗುಂಡು ಹಾರಿಸುವಾಗ ಗಾಂಧಿ ಅಡ್ಡ ಬಂದಿರಬಹುದು. ಅದನ್ನು ಹೊಸದಾಗಿ ತನಿಖೆ ಮಾಡಲು ನಾವು ಎನ್ಐಎ ಅವರಿಗೆ ವಹಿಸಲಿದ್ದೇವೆ. ಅವರು ಗಾಂಧಿ ಹತ್ಯೆಯ ತನಿಖೆಯನ್ನು ಮಾಡಿ ನಿಜವಾದ ಆರೋಪಿಗಳು ಪಾಕಿಸ್ತಾನದಲ್ಲಿರಲಿ, ಸಿರಿಯಾದಲ್ಲಿರಲಿ ಅವರನ್ನು ಪತ್ತೆ ಹಚ್ಚಲಿದ್ದಾರೆ. ಅವರ ತನಿಖೆ ಮುಗಿಯುವವರೆಗೆ ಗೋಡ್ಸೆವಾದಿಗಳನ್ನು ದೇಶದ್ರೋಹಿಗಳು ಎಂದು ಹೇಳಲು ಆಗುವುದಿಲ್ಲ....’’

‘‘ಸಾರ್...ದಲಿತರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ಹೆಚ್ಚುತ್ತಿವೆಯಲ್ಲ?’ ಕಾಸಿ ಕೇಳಿದ.

‘‘ಅದಕ್ಕಾಗಿ ಇನ್ನೂ ಬಗೆ ಬಗೆಯ ಕಾನೂನುಗಳನ್ನು ಜಾರಿಗೆ ತರಲಿದ್ದೇವೆ. ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಈ ಬಿಸಿ ಬಿಸಿ ಕಾಯ್ದೆ ಕಾನೂನುಗಳನ್ನು ವಿತರಿಸುವ ಏರ್ಪಾಡು ಮಾಡುತ್ತೇವೆ....ರೇಷನ್ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಉಚಿತವಾಗಿ ವಿತರಿಸಲು ಹೇಳಿದ್ದೇವೆ. ಗಲಭೆ ಪೀಡಿತ ಪ್ರದೇಶಗಳಿಗೆ ಉಚಿತವಾಗಿ ಈ ಕಾನೂನುಗಳನ್ನು ಪೂರೈಸಲಿದ್ದೇವೆ’’

‘‘ಸಾರ್...ಪೆಟ್ರೋಲ್ ಬೆಲೆಯೇರಿಕೆಯಾಗುತ್ತಿದೆ...ಹಣದುಬ್ಬರ....’’ ಕಾಸಿ ಕೇಳಿದ.

‘‘ ಪೆಟ್ರೋಲ್ ಬೆಲೆಯೇರಿಕೆಗೂ ಕೆಲವು ಸ್ವದೇಶಿ ಕಾನೂನುಗಳನ್ನು ಜಾರಿಗೊಳಿಸುತ್ತೇವೆ. ಟೊಮೆಟೊ ಬೆಲೆಯೇರಿಕೆಗೂ ಕಾನೂನುಗಳನ್ನು ಜಾರಿಗೊಳಿಸೋಣ....ಒಟ್ಟಿನಲ್ಲಿ ದೇಶಾದ್ಯಂತ ಕಾನೂನುಗಳ ಜಾರಿಗಾಗಿ ಬೃಹತ್ ಕಾರ್ಖಾನೆಗಳನ್ನು ತೆರೆಯಬೇಕು ಎಂದಿದ್ದೇವೆ. ಕಾನೂನುಗಳನ್ನು ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡಿ ‘ವಿದೇಶ ವಿನಿಮಯ’ ಹೆಚ್ಚಿಸುವ ಪ್ರಯತ್ನವೂ ನಡೆಯುತ್ತಿದೆ....’’

ಕಾಸಿಗೆ ತುಂಬಾ ಸಂತೋಷವಾಯಿತು. ದೇಶಾದ್ಯಂತ ಕಾನೂನಿನ ಉತ್ಪಾದನೆ ಹೆಚ್ಚಿ, ದೇಶ ಶೀಘ್ರದಲ್ಲೇ ವಿಶ್ವಗುರುವಾಗುವುದು ಖಚಿತ ಎನ್ನುತ್ತಾ ಬಿಸಿ ಬಿಸಿ ಕಾನೂನೊಂದನ್ನು ಬಾಯಿಗೆ ಹಾಕಿಕೊಂಡು ಸವಿಯ ತೊಡಗಿದ. ಹಳಸಿದ ವಾಸನೆಯಿಂದ ಹೊಟ್ಟೆ ತೊಳೆಸಿದಂತಾಯಿತು. ಎಲ್ಲಿ ದೋಶದ್ರೋಹದ ಕಾನೂನು ತನ್ನ ಮೇಲೆಯೇ ಜಾರಿಯಾಗುತ್ತದೋ ಎಂದು ಹೆದರಿ ‘‘ಸಾರ್ ಈಗ ಬಂದೆ....ದಿಲ್ಲಿಯ ಶೌಚಾಲಯದ ಸ್ಥಿತಿಗತಿ ಹೇಗಿದೆ ಎಂದು ವೀಕ್ಷಿಸಿ ಬರುವೆ’’ ಎನ್ನುತ್ತಾ ಅಲ್ಲಿಂದ ಜಾಗ ಖಾಲಿ ಮಾಡಿದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X