ಮೂಡುಬಿದಿರೆ, ಫೆ.13: ಸುಗಂಧ ದ್ರವ್ಯ ವರ್ತಕರಾಗಿದ್ದ ತೋಡಾರಿನ ಬಾವುಂಞಿ ಹಾಜಿ (74) ಅಲ್ಪಕಾಲದ ಅಸೌಖ್ಯದಿಂದ ಕಳೆದ ಶನಿವಾರ ನಿಧನರಾದರು. ಅವರು ಪತ್ನಿ, ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕಳೆದ ಹಲವು ದಶಕಗಳಿಂದ ಸುಗಂಧ ದ್ರವ್ಯ ವ್ಯಾಪಾರಿಯಾಗಿದ್ದ ಅವರು ಪ್ರಾಮಾಣಿಕತೆ, ಸರಳ ಸಜ್ಜನಿಕೆಯಿಂದ ಗುರುತಿಸಿಕೊಂಡಿದ್ದರು.