ಎ.ಗೋದಾವರಿ ದೇವಿ
ಮಂಗಳೂರು: ಇಲ್ಲಿನ ಮಿಲಾಗ್ರಿಸ್ ಹೈಸ್ಕೂಲ್ನ ನಿವೃತ್ತ ಶಿಕ್ಷಕಿ, ಮಣ್ಣಗುಡ್ಡೆಯ ಸೇವಕ್ ಗಾರ್ಡನ್ ನಿವಾಸಿ ಎ.ಗೋದಾವರಿ ದೇವಿ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಗೋದಾವರಿ ದೇವಿಯವರು ಮಿಲಾಗ್ರಿಸ್ ಹೈಸ್ಕೂಲ್ನಲ್ಲಿ 34 ವರ್ಷಗಳಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕಿಯಾಗಿ, ಟೀಚರ್ಸ್ ಕೋ-ಆಪರೇಟಿವ್ ಸೊಸೈಟಿ, ಗಾಳದ ಕೊಂಕಣಿ ಅಭ್ಯುದಯ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಜವಾಬ್ಧಾರಿಯನ್ನು ನಿರ್ವಹಿಸಿದ್ದರು.
ಮೃತರು ಓರ್ವ ಪುತ್ರ ಸೇರಿದಂತೆ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಮಾಜಿ ಕಾರ್ಪೋರೇಟರ್ಗಳಾದ ನವೀನ್ ಚಂದ್ರ ಮತ್ತು ಭಾಸ್ಕರ್ ರಾವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story