ಹೆಜಮಾಡಿ ಟೋಲ್ ಗೇಟ್ ಬಳಿ ಹೊತ್ತಿ ಉರಿದ ಈಚರ್ ವಾಹನ
ಹೆಜಮಾಡಿ: ಇಲ್ಲಿನ ಟೋಲ್ ಗೇಟ್ ಬಳಿ ಈಚರ್ ವಾಹನವೊಂದು ಹೊತ್ತಿ ಉರಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ವಾಹನವನ್ನು ನಿಲ್ಲಿಸಿ ಅಡುಗೆ ತಯಾರಿ ಮಾಡುತ್ತಿರುವ ವೇಳೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಈಚರ್ ಎಂಸಿಎಫ್ ನಿಂದ ಭದ್ರಾವತಿಗೆ ತೆರಳುತ್ತಿತ್ತು. ಚಾಲಕ ನವೀದ್ ಪಾಶಾ ವಾಹನದಿಂದ ಹಾರಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
Next Story