ತಾಂತ್ರಿಕ ಸಮಸ್ಯೆ ಹಿನ್ನೆಲೆ ; ದುಬೈಗೆ ಹೊರಟಿದ್ದ ವಿಮಾನ ವಿಳಂಬ ಯಾನ
ಮಂಗಳೂರು, ಜ.26: ಮಂಗಳೂರಿನಿಂದ ದುಬೈಗೆ ಹೊರಟಿದ್ದ ವಿಮಾನವು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿ ಯಾನಗೈದ ಘಟನೆ ಬುಧವಾರ ನಡೆದಿದೆ.
ಬುಧವಾರ ಮುಂಜಾನೆ ಪ್ರಯಾಣ ಬೆಳೆಸಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ತಾಂತ್ರಿಕ ಸಮಸ್ಯೆಗಳಿಂದಾಗಿ ವಿಳಂಬವಾಗಿ ಸಂಚರಿಸಿತು ಎಂದು ಮೂಲಗಳು ತಿಳಿಸಿವೆ.
ಮುಂಜಾನೆ ಸುಮಾರು 6:15ಕ್ಕೆ ದುಬೈಗೆ ತೆರಳಬೇಕಿದ್ದ ಏರ್ಇಂಡಿಯಾದ ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ಸಂಚಾರ ನಡೆಸಲಿಲ್ಲ. ಸಂಜೆ 6:15ಕ್ಕೆ ಮರು ನಿಗದಿಪಡಿಸಿರುವುದಾಗಿ ಏರ್ಇಂಡಿಯಾ ಅಧಿಕಾರಿಗಳು ಪ್ರಯಾಣಿಕರಿಗೆ ಮಾಹಿತಿ ನೀಡಿದರು. ಇದರಿಂದ ಪ್ರಯಾಣಿಕರು ಸಾಕಷ್ಟು ಸಮಸ್ಯೆಗೆ ಒಳಗಾದರು. ಅಲ್ಲದೆ ಏರ್ಇಂಡಿಯಾ ಸಂಸ್ಥೆಯ ವತಿಯಿಂದ ಪ್ರಯಾಣಿರಿಗೆ ಹೊಟೇಲ್ಗಳಲ್ಲಿ ಆಹಾರ ಹಾಗೂ ವಾಸ್ತವ್ಯ ಕಲ್ಪಿಸಲಾಯಿತು. ಅಲ್ಲದೆ ಸಂಜೆ 6:15ಕ್ಕೆ ದುಬೈಗೆ ವಿಮಾನ ಪ್ರಯಾಣ ಬೆಳೆಸಿತು ಎಂದು ಮೂಲಗಳು ತಿಳಿಸಿವೆ.
Next Story