ಕಾಟಿಪಳ್ಳ: ಮೀಫ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಶಿಬಿರ

ಮಂಗಳೂರು, ಫೆ.7: ಕಾಟಿಪಳ್ಳದ ಮಿಸ್ಬಾಹ್ ಮಹಿಳಾ ಕಾಲೇಜಿನಲ್ಲಿ ಮುಸ್ಲಿಂ ಎಜ್ಯುಕೇಶನಲ್ ಇನ್ ಸ್ಟಿಟ್ಯೂಶನ್ಸ್ ಫೆಡರೇಶನ್(ಮೀಫ್) ದ.ಕ. ಮತ್ತು ಉಡುಪಿ ಜಿಲ್ಲೆ ಸಂಸ್ಥೆಯು ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಪ್ರಾರಂಭವಾಗುವ ತನಕ ಪ್ರತೀ ರವಿವಾರ ವಿಶೇಷ ತರಬೇತಿ ಶಿಬಿರಕ್ಕೆ ರವಿವಾರ ಚಾಲನೇ ನೀಡಲಾಯಿತು.
ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಸ್ಬಾಹ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷಬಿ.ಎಂ.ಮುಮ್ತಾಝ್ ಅಲಿ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,ಶೈಣಿಕ ಪ್ರಗತಿಗೆ ಶ್ರಮಿಸುತ್ತಿರುವ ಮೀಫ್ ಸಂಸ್ಥೆಯನ್ನು ಪ್ರಶಂಸಿದರು.
ಒಟ್ಟು 8 ಶಾಲೆಗಳ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಪರಿಣತ ಶಿಕ್ಷಣ ತಜ್ಞರಾದ ಜೇಸಿ ವಿನಯಚಂದ್ರ ಹಾಗೂ ಅಬೂಬಕರ್ ಅಶ್ರಫ್ ತರಬೇತಿ ನೀಡಿದರು.
ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬ ವಿಚಾರವಾಗಿ ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ತರಗತಿ ನೀಡಿದರು.
ತರಬೇತುದಾರರು ಶಿಕ್ಷಕರಿಗೆ ಪಾಠ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಮೀಫ್ ಪ್ರಧಾನ ಕಾರ್ಯದರ್ಶಿ ಬಿ.ಎ.ನಝೀರ್, ಜೊತೆ ಕಾರ್ಯದರ್ಶಿಗಳಾದ ರಿಯಾಝ್ ಅಹ್ಮದ್ ಕಣ್ಣೂರ್, ಪಿ.ಎ.ಇಲ್ಯಾಸ್, ಕಾರ್ಯಕ್ರಮ ಸಂಯೋಜಕರಾದ ಇಕ್ಬಾಲ್ ಕೃಷ್ಣಾಪುರ ಹಾಗೂ ಜೋಕಟ್ಟೆ ಅಂಜುಮನ್ ಸಂಚಾಲಕ ಟಿ.ಅಬೂಬಕರ್ ಉಪಸ್ಥಿತರಿದ್ದರು.
ಮೀಫ್ ಮ್ಯಾನೇಜರ್ ಹಖೀಲ್ ಹಸನ್ ಕಾರ್ಯಕ್ರಮ ನಿರೂಪಿಸಿದರು.
ರಿಯಾಝ್ ಅಹ್ಮದ್ ಸ್ವಾಗತಿಸಿದರು. ಇಕ್ಬಾಲ್ ವಂದಿಸಿದರು.







