ದಕ್ಷಿಣ ಕನ್ನಡ ಜಿಲ್ಲೆಯ ಮೂವರು ನ್ಯಾಯಾಧೀಶರಾಗಿ ನೇಮಕ
ಜೋಯ್ಲಿನ್ - ಸುನೀತಾ
ಮಂಗಳೂರು : ಇತ್ತೀಚೆಗೆ ನಡೆದ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಮೂಡಬಿದಿರೆಯ ಸುನೀತಾ ಭಂಡಾರಿ, ಶ್ರುತಿ ಕೆ.ಎಸ್. ಮತ್ತು ಜೋಯ್ಲಿನ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು, ನ್ಯಾಯಾಧೀಶರ ನೇಮಕಾತಿ ಸಮಿತಿ ಪ್ರಕಟಿಸಿದ 75 ಮಂದಿ ಯಶಸ್ವೀ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಸುನೀತಾ ಭಂಡಾರಿ ಅವರು ಮೂಡಬಿದಿರೆ ವಕೀಲರ ಸಂಘದ ಸದಸ್ಯೆಯಾಗಿದ್ದಾರೆ.
Next Story