ಸಿವೈಸಿ ವತಿಯಿಂದ ರಮಝಾನ್ ಕಿಟ್ ವಿತರಣೆ
ಕಾಟಿಪಳ್ಳ: ಸಿವೈಸಿ ಹಾಗೂ ಸಿವೈಸಿ ಗ್ಲೋಬಲ್ ವತಿಯಿಂದ ಸುಮಾರು 100 ಕುಟುಂಬಗಳಿಗೆ ರಮಝಾನ್ ಕಿಟ್ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ವಿತರಿಸಲಾಯಿತು.
ಮುಹ್ಯುದ್ದೀನ್ ಜುಮಾ ಮಸೀದಿ ಕಾಟಿಪಳ್ಳ ಇದರ ಖತೀಬ್ ಅಬ್ದುಲ್ ನಾಸರ್ ಮದನಿ ದುಆ ನೆರವೇರಿಸಿ ಚಾಲನೆ ನೀಡಿದರು.
ಸಿವೈಸಿಯ ಮಾಜಿ ಅಧ್ಯಕ್ಷರುಗಳಾದ ಹುಸೈನ್ ಕಾಟಿಪಳ್ಳ, ಹಬೀಬ್ ಕಾಟಿಪಳ್ಳ, ಅಶ್ರಫ್ ತಾಜ್ ಫಿಶ್, ಸಂಘದ ಅಧ್ಯಕ್ಷ ನಾಸರ್ ಹಸನ್, ಸಿ.ವೈ.ಸಿ.ಗ್ಲೋಬಲ್ ಸದಸ್ಯ ಇರ್ಫಾನ್, ಜಮ್ಶೀದ್, ನೂರು ಮುಹಮ್ಮದ್, ಝಮೀರ್ ಮುಂತಾದವರು ಉಪಸ್ಥಿತರಿದ್ದರು. ಸಂಚಾಲಕ ಸಲೀಂ ರಝಾಕ್ ಶ್ಯಾಡೊ ಸ್ವಾಗತಿಸಿ, ವಂದಿಸಿದರು.
Next Story