ಹಿದಾಯತ್ ನಗರ ಇಹ್ಸಾನುಲ್ ವಹ್ಹಾಬ್ ಮದರಸಕ್ಕೆ ಶೇ 80 ಫಲಿತಾಂಶ
ಮಂಗಳೂರು: ಇಸ್ಲಾಮಿಕ್ ಎಜುಕೇಷನ್ ಬೋರ್ಡ್ ಆಫ್ ಇಂಡಿಯಾದ ಅಧೀನದಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆದ 2021-22 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಕೋಟೆಕಾರ್ ಹಿದಾಯತ್ ನಗರದ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಮದ್ರಸದ ವಿಧ್ಯಾರ್ಥಿಗಳು ಗರಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾಗಿ ಶೇ 80 ಫಲಿತಾಂಶ ದಾಖಲಿಸಿದ್ದಾರೆ.
ಆ ಪೈಕಿ ಮುಹಮ್ಮದ್ ಅಶ್ಫಾಕ್, ಆಸಿಯ ಫಾತಿಮ, ಶಿಫ, ಝಾಹಿಯ್ಯ, ಮೈಮೂನ ಸಾನಿಯ,ಆಮಿನ ಮುಫೀದ, ಫಾತಿಮ ತಬ್ಸೀರ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಮದರಸ ಆಡಳಿತ ಮಂಡಳಿ, ಪ್ರಾಧ್ಯಾಪಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ ಎಂದು ಕಾರ್ಯದರ್ಶಿ ಜಾಬಿರ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story