ಎಸೆಸೆಲ್ಸಿ: ದಾರುಲ್ ಇರ್ಶಾದ್ ಗೆ 100 ಶೇ. ಫಲಿತಾಂಶ
ಸಾಂದರ್ಭಿಕ ಚಿತ್ರ
ಮಾಣಿ, ಮೇ 19: ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನ ದಾರುಲ್ ಇರ್ಶಾದ್ ವಸತಿ ಸಹಿತ ಬಾಲಕರ ಪ್ರೌಢಶಾಲೆಯು 2021-22ರ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ದಾಖಲಿಸಿದೆ.
16 ವಿದ್ಯಾರ್ಥಿಗಳು ಎ ಗ್ರೇಡ್, 7 ವಿದ್ಯಾರ್ಥಿಗಳು ಬಿ+ ಗ್ರೇಡ್ 9 ವಿದ್ಯಾರ್ಥಿಗಳು ಬಿ ಗ್ರೇಡ್ ಗಳಿಸಿದ್ದಾರೆ. ಮುಹಮ್ಮದ್ ಅಸ್ಲಮ್ ಮಾಲಾಡಿ ಮಡಂತ್ಯಾರು 559 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದರೆ, ಮುಹಮ್ಮದ್ ಅಮೀನ್ ಪಿ. ಮುಡಿಪು 551 ಗಳಿಸಿ ದ್ವಿತೀಯ, ಮುಹಮ್ಮದ್ ಸಲೀಂ ಮಾವಿನಕಟ್ಟೆ ಅಳಿಕೆ 549 ತೃತೀಯ ಸ್ಥಾನ ಗಳಿಸಿದ್ದಾರೆ.
Next Story