ಕೊಲ್ಲರಕೋಡಿಯಲ್ಲಿ ಗುಡ್ಡ, ರಸ್ತೆ ಕುಸಿತ; ಪಂಚಾಯತ್, ಸ್ಥಳೀಯರಿಂದ ಕಾರ್ಯಾಚರಣೆ
ಕೊಲ್ಲರಕೋಡಿ: ಸೋಮವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಕೊಲ್ಲರಕೋಡಿ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ, ರಸ್ತೆಯ ಬದಿ ಕುಸಿತ ಹಾಗು ಎರಡು ಕಡೆ ಮನೆಯ ಕಾಂಪೌಂಡು ಕುಸಿದು ಅಪಾರ ಹಾನಿ ಉಂಟಾಗಿದೆ.
ಪಂಚಾಯತ್ ಅಧಿಕಾರಿಗಳು, ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಭಾರೀ ಮಳೆಗೆ ರಭಸವಾಗಿ ನೀರು ಹರಿಯುತ್ತಿದ್ದು, ಇದರಿಂದ ರಸ್ತೆ ಹಾಗು ಮನೆಗೆ ಹಾನಿಯಾಗಿದೆ. ಭಾರಿ ಮಳೆಯಿಂದ ಗುಡ್ಡ ಕುಸಿತ ಹಾಗು ರಸ್ತೆ ಬದಿಯಲ್ಲಿ ಕುಸಿತ ಮತ್ತು ಎರಡು ಮನೆಗಳ ಕಾಂಪೌಂಡು ಗೋಡೆ ಕುಸಿದು ಅಪಾರ ಹಾನಿ ಉಂಟಾಗಿದೆ. ಸ್ಥಳೀಯರು ಹಾಗು ಪಂಚಾಯತ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಹೆಚ್ಚಿನ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಸ್ತೆ ಬದಿ ಕುಸಿತಕ್ಕೆ ಪರಿಹಾರ ಕಾರ್ಯಾಚರಣೆ ನಡೆಸುವುದರೊಂದಿಗೆ ವಾಹನ ಸವಾರರಿಗೆ ಮುನ್ಸೂಚನೆಯನ್ನೂ ನೀಡುತ್ತಿದ್ದಾರೆ.