ಭಾರೀ ಮಳೆಗೆ ಫರಂಗಿಪೇಟೆ ಅಮೆಮಾರ್ ಸಂಪರ್ಕ ರಸ್ತೆ ಜಲಾವೃತ: ಸಾರ್ವಜನಿಕರಿಂದ ಪ್ರತಿಭಟನೆ
ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ ಅಮೆಮಾರ್ ಗೆ ಸಂಪರ್ಕ ಕಲ್ಪಿಸುವ ಪುಂಚಮೆ ರಸ್ತೆ, ಕುಂಜತ್ಕಳ ರಸ್ತೆ, ರೈಲ್ವೇ ಸ್ಟೇಷನ್ ರಸ್ತೆ ಇಂದು ಸುರಿದ ಮಳೆಗೆ ಜಾಲಾವೃತವಾಗಿ ದೈನಂದಿನ ಚಟುವಟಿಕೆಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ನಾಗರಿಕರು ಸಂಕಷ್ಟ ಎದುರಿಸುವಂತಾಗಿದೆ.
ಶನಿವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ಇಲ್ಲಿನ ಪುಂಚಮೆ ಮತ್ತು ಕುಂಜತ್ಕಳ ರಸ್ತೆ ಜಲಾವೃತವಾಗಿ ಜನರು ವಿದ್ಯಾರ್ಥಿಗಳು, ಜನಸಾಮಾನ್ಯರು ನಡೆದಾಡಲು ಸಂಕಷ್ಟ ಎದುರಿಸುವಂತಾಗಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ನಾಗರಿಕರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ ಮತ್ತು ಅಮೆಮಾರ್ ವಾರ್ಡ್ ಸದಸ್ಯ ಅಬ್ದುಲ್ ರಝಾಕ್ ಸಮಸ್ಯೆಯನ್ನು ಪರಿಹಾರಗೆಯ್ಯುವ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂ ಮಾಜಿ ಸದಸ್ಯರಾದ ಬಶೀರ್ ತಂಡೇಲ್ ಮತ್ತು ಸ್ಥಳೀಯರಾದ ಹೈದರ್ ಅಮೆಮಾರ್, ಇಮ್ರಾನ್ ಅರ್ಕುಳ, ಅಬ್ಬಾಸ್ ಎಫ್.ಎ, ಸಮೀರ್ ಸಿ. ಎಚ್, ಹಮೀದ್ ಬೀಡಿ ಮತ್ತಿತರರು ಉಪಸ್ಥಿತರಿದ್ದರು