ಪುಂಜಾಲಕಟ್ಚೆ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಪುಂಜಾಲಕಟ್ಚೆ: ಬದ್ರಿಯಾ ಜುಮಾ ಮಸೀದಿ ಹಾಗೂ ರೌಳತುಲ್ ಉಲೂಂ ಮದ್ರಸದ ಜಂಟಿ ಆಶ್ರಯದಲ್ಲಿ ಸಂಭ್ರಮದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಪುಂಜಾಲಕಟ್ಟೆಯಲ್ಲಿ ನಡೆಯಿತು.
ಜುಮಾ ಮಸೀದಿಯ ಅಧ್ಯಕ್ಷರಾದ ಯೂಸುಫ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಖತೀಬ್ ಅಶ್ರಫ್ ಫೈಝಿ, ಮುಖ್ಯೋಪಾಧ್ಯಾಯರಾದ ಅಬ್ದುಲ್ ಮಜೀದ್ ದಾರಿಮಿ ಸಂದೇಶ ಭಾಷಣ ಮಾಡಿದರು.
ಅಧ್ಯಾಪಕರಾದ ಅಬ್ದುರ್ರಹ್ಮಾನ್ ಅರ್ಶದಿ, ಯಹ್ಯಾ ಮುಸ್ಲಿಯಾರ್, ಪಂಚಾಯತ್ ಸದಸ್ಯರಾದ ಹನೀಫ್ ಬೋರುಗುಡ್ಡೆ ಮಸೀದಿಯ ಕಾರ್ಯದರ್ಶಿಗಳಾದ ಉಸ್ಮಾನ್ ಪಿ, ಕಾದರ್ ಮಂಜಲ್ಪಲ್ಕೆ, ಕೋಶಾಧಿಕಾರಿ ಅಶ್ಫಕ್, ಸದಸ್ಯರಾದ ಸಾಜಿ ಹುಸೈನ್, ರಝಾಕ್ ಮಂಜಲ್ಪಲ್ಕೆ ಸೇರಿದಂತೆ ವಿದ್ಯಾರ್ಥಿಗಳೂ, ಪೋಷಕರೂ, ಹಳೆ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.
ಅಬ್ದುಲ್ ಲತೀಫ್ ಮಂಜಲ್ಪಲ್ಕೆ ಸ್ವಾಗತಿಸಿದರು. ಯಂಗ್ ಮೆನ್ಸ್ ಕಾರ್ಯದರ್ಶಿ ಹಿದಾಯತುಲ್ಲಾ ವಂದಿಸಿದರು.