ವಿಟ್ಲ: ದುನಿಯಾ ಫ್ರೆಂಡ್ಸ್- ಡಿ ಗ್ರೂಪ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ವಿಟ್ಲ: ದುನಿಯಾ ಫ್ರೆಂಡ್ಸ್ ಮತ್ತು ಡಿ ಗ್ರೂಪ್ ವತಿಯಿಂದ 75 ನೇ ಸ್ವಾತಂತ್ರೋತ್ಸವವನ್ನು ಮೇಗಿನಪೇಟೆಯಲ್ಲಿ ಆಚರಿಸಲಾಯಿತು.
ಇಬ್ರಾಹಿಂ ಏರ್ ಸೌಂಡ್ಸ್ , ವಿ.ಪದ್ಮನಾಭ ಶೆಟ್ಟಿ ಗಾಳಿಹಿತ್ಲು ಮತ್ತು ಅಬ್ದುಲ್ ಖಾದರ್ ಧ್ವಜಾರೋಹಣ ನರವೇರಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಕೆ.ಎಂ.ಅಶ್ರಫ್, 'ಡಿ ' ಗ್ರೂಪ್ (ರಿ) ವಿಟ್ಲ ಇದರ ಅದ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಉದ್ಯಮಿಗಳಾದ ವಿ.ಎಚ್.ಅಶ್ರಫ್ ವಿಟ್ಲ, ಅಝೀಝ್ ಸನ. ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಶೀತಲ್, ಹೊರೈಝನ್ ಪಬ್ಲಿಕ್ ಸ್ಕೂಲ್ ಇದರ ಅದ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ವಿ.ರಮಾನಾಥ ವಿಟ್ಲ, ಶ್ರೀನಿವಾಸ್ ಶೆಟ್ಟಿ ಕೊಲ್ಯ, ವಿಟ್ಲ ಜಮಾಅತ್ ಯೂತ್ ವಿಂಗ್ಸ್ ಅಧ್ಯಕ್ಷ ರಫೀಕ್ ಪೊನ್ನೋಟು, ಪ್ರಾಯೋಜಕರು , ಅಬ್ದುಲ್ ರಝಾಕ್ ಕುಂಡಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಧ್ವಜಾರೋಹಣ ಬಳಿಕ ಸ್ವಾತಂತ್ರೋತ್ಸವ ಅಂಗವಾಗಿ ಕ್ರೀಡಾ ಕಾರ್ಯಕ್ರಮ ನಡೆಯಿತು.
ಹಗ್ಗ- ಜಗ್ಗಾಟದಲ್ಲಿ ದುನಿಯಾ ಫ್ರೆಂಡ್ಸ್ ವಿಟ್ಲ ಪ್ರಥಮ ಹಾಗೂ ಡಿ ಗ್ರೂಪ್ ವಿಟ್ಲ ದ್ವಿತೀಯ ಸ್ಥಾನ ಪಡೆದರೆ, ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಶಿಹಾಬ್, ಆದಿಲ್ ಹಾಗೂ ಅಜ್ಜು ವಿಜೇತರಾದರು.